ಕೋವಿಡ್ ವೇಳೆ ಆರು ತಿಂಗಳು ಕುಟುಂಬದಿಂದ ದೂರ: ಫಾರ್ಮಸಿ ಅಧಿಕಾರಿ ಸುರೇಶ್ ಅವರಿಗೆ ಉತ್ತಮ ಫಾರ್ಮಸಿಸ್ಟ್ ಪ್ರಶಸ್ತಿ

Sidlaghatta : ವಿಶ್ವ ಫಾರ್ಮಸಿಸ್ಟ್ ದಿನಾಚರಣೆ (ಸೆ.25) ಅಂಗವಾಗಿ ಸರ್ಕಾರ ನೀಡುವ ಉತ್ತಮ ಫಾರ್ಮಸಿಸ್ಟ್ ಪ್ರಶಸ್ತಿಗೆ ಸಾರ್ವಜನಿಕ ಆಸ್ಪತ್ರೆಯ ಹಿರಿಯ ಫಾರ್ಮಸಿ ಅಧಿಕಾರಿ ಸುರೇಶ್ ಸಿ. ಆಯ್ಕೆಯಾಗಿದ್ದಾರೆ.
ಸುರೇಶ್ ಅವರು ಸಾರ್ವಜನಿಕ ಆಸ್ಪತ್ರೆಯ ಫಾರ್ಮಸಿ ವಿಭಾಗದ ನೋಡಲ್ ಅಧಿಕಾರಿಯಾಗಿದ್ದು, ಔಷಧಗಳ ಸಂಗ್ರಹಣೆ, ವಿತರಣೆ ಹಾಗೂ ಸಮರ್ಪಕ ಬಳಕೆಯ ಹೊಣೆ ಹೊತ್ತಿದ್ದಾರೆ. ವಿಭಾಗದ ಒಳಾಂಗಣ ವಿನ್ಯಾಸ ರೂಪಿಸುವಲ್ಲಿ ಹಾಗೂ ಎನ್‌ಕ್ಯೂಎಎಸ್ ಮತ್ತು ಕಾಯಕಲ್ಪ ಯೋಜನೆಗಳ ಅನುಷ್ಠಾನದಲ್ಲಿ ಪಾಲ್ಗೊಂಡಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಸುಮಾರು ಆರು ತಿಂಗಳ ಕಾಲ ಕುಟುಂಬದಿಂದ ದೂರವಿದ್ದು ಕರ್ತವ್ಯ ನಿರ್ವಹಿಸಿದ್ದರು. ರೋಗಿಗಳ ಸುರಕ್ಷತೆ ಮತ್ತು ಔಷಧ ವಿತರಣೆಯಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಸರ್ಕಾರ ಪ್ರಶಸ್ತಿ ಘೋಷಿಸಿದೆ.
For Daily Updates WhatsApp ‘HI’ to 7406303366
Summary in English
Suresh C, senior pharmacy officer at the Government Hospital in Sidlaghatta, has been selected for the government’s Best Pharmacist award, given on World Pharmacists Day (25 September). He is the nodal officer of the hospital pharmacy, handling drug storage, distribution and rational use, and worked away from his family for about six months during Covid.
Be a reporter
ಊರಿನ ಸುದ್ದಿ, ಫೋಟೋ ಕಳುಹಿಸಿ.
Send news