2020-21 ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ತಾಲ್ಲೂಕಿನ ಮೂವರು ಶಿಕ್ಷಕರು ಭಾಜನರಾಗಿದ್ದಾರೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಹಿರೇಬಲ್ಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮನೋರ್‌ಮಣಿ.ಬಿ, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಮುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ದಾವೂದ್‌ಪಾಷ.ಎಸ್, ಮತ್ತು ಪ್ರೌಢಶಾಲೆಯ ವಿಭಾಗದಲ್ಲಿ ತುಮ್ಮನಹಳ್ಳಿ ಸರ್ಕಾರಿ ಪ್ರೌಡಶಾಲೆಯ ಶಿಕ್ಷಕಿ ಮಾಲತಿ.ಎಸ್, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆಯುತ್ತಿದ್ದಾರೆ. ಮನೋರ್‌ಮಣಿ.ಬಿ. ಶಿಕ್ಷಕಿ, ಹಿರೇಬಲ್ಲ. ಕಳೆದ 22 ವರ್ಷಗಳಿಂದ ತಾಲೂಕಿನ ಕಾಳನಾಯಕನಹಳ್ಳಿ, ಜಂಗಮಕೋಟೆ ಸೇರಿದಂತೆ ಪ್ರಸ್ತುತ ಹಿರೇಬಲ್ಲ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಚಿತ್ರ ಕಲೆ ಇವರ ಹವ್ಯಾಸವಾಗಿದ್ದು 1 ರಿಂದ 3 ನೇ ತರಗತಿ ಮಕ್ಕಳಿಗೆ ಭೋದಿಸುತ್ತಾರೆ. ದಾವೂದ್‌ಪಾಷ.ಎಸ್. ಶಿಕ್ಷಕ. ಮುತ್ತೂರು. ತಾಲೂಕಿನ ಅಂಬಿಗಾನಹಳ್ಳಿ ಗ್ರಾಮದ ಶಾಲೆಯಲ್ಲಿ ೫ ವರ್ಷ ಸೇವೆ ಸಲ್ಲಿಸಿದ್ದು ಪ್ರಸಕ್ತ ಮುತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಏಳು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಆಂಗ್ಲಭಾಷೆ ಭೋದಿಸುತ್ತಾರೆ. ಮಾಲತಿ.ಎಸ್. ಶಿಕ್ಷಕಿ. ತುಮ್ಮನಹಳ್ಳಿ. ತಾಲೂಕಿನ ಅಬ್ಲೂಡು ಪ್ರಾಥಮಿಕ ಶಾಲೆಯಲ್ಲಿ 6 ವರ್ಷ, ಆವಲಗುರ್ಕಿಯಲ್ಲಿ 2 ವರ್ಷ ಸೇವೆ ಸಲ್ಲಿಸಿ ಕಳೆದ ಹತ್ತು ವರ್ಷಗಳಿಂದ ತುಮ್ಮನಹಳ್ಳಿ ಸರ್ಕಾರಿ ಪ್ರೌಡಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಾಥಮಿಕ ಶಾಲೆಯಲ್ಲಿ ಹಿಂದಿ ಭಾಷೆ ಭೋದನೆ ಮಾಡುತ್ತಿದ್ದ ಇವರು ಇದೀಗ ಪ್ರೌಡಶಾಲೆಯ ಮಕ್ಕಳಿಗೆ ಕನ್ನಡ ಭಾಷೆ ಭೋದಿಸುತ್ತಾರೆ.