Home News ತಾಲ್ಲೂಕಿನಲ್ಲಿ ಅಭಿಮಾನಿಗಳಿಂದ ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ಹುಟ್ಟುಹಬ್ಬ ಆಚರಣೆ

ತಾಲ್ಲೂಕಿನಲ್ಲಿ ಅಭಿಮಾನಿಗಳಿಂದ ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ಹುಟ್ಟುಹಬ್ಬ ಆಚರಣೆ

0

ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ರವರ 51 ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ತಾಲ್ಲೂಕಿನ ವಿವಿದೆಡೆ ಕೊರೊನಾ ವಾರಿಯರ್ಸ್ ಗಳಾದ ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ಗಳನ್ನು ಮತ್ತು ಫೇಸ್ ಶೀಲ್ಡ್ ಗಳನ್ನು ವಿತರಿಸಿದರು.
Kondappagarahalli Sidlaghatta Covid Centre Faculty Felicitationತಾಲ್ಲೂಕಿನ ಕೊಂಡಪ್ಪಗಾರಹಳ್ಳಿಯಲ್ಲಿರುವ ಕೋವಿಡ್ ಕೇರ್ ಸೆಂಟರ್ ನಲ್ಲಿ ಆರೋಗ್ಯ ಸಿಬ್ಬಂದಿಯನ್ನು ಸನ್ಮಾನಿಸಿ, ಫೇಸ್ ಶೀಲ್ಡ್ ಗಳನ್ನು ನೀಡಿ, ಅಲ್ಲಿನ ರೋಗಿಗಳಿಗೆ ಬೇಕಾದ ವಿವಿಧ ರೀತಿಯ ಹಣ್ಣುಗಳನ್ನು ನೀಡಿದರು.
ತಾಲ್ಲೂಕಿನ ಮೇಲೂರಿನ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗೆ ದಿನಸಿ ಕಿಟ್ ಗಳನ್ನು ಹಾಗೂ ಫೇಸ್ ಶೀಲ್ಡ್ ಗಳನ್ನು ವಿತರಿಸಿ, ವೈದ್ಯರು, ಪಿಡಿಒ, ಲ್ಯಾಬ್ ಸಿಬ್ಬಂದಿ, ಸಾಕ್ಷರತೆ ಸಂಯೋಜಕರನ್ನು ಸನ್ಮಾನಿಸಲಾಯಿತು.

ಚೌಡಸಂದ್ರ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಅಂಗವಿಕಲರಿಗೆ ದಿನಸಿ ಕಿಟ್ ವಿತರಿಸಲಾಯಿತು. ನಾಗಮಂಗಲ ಮತ್ತು ಹೊಸಪೇಟೆ ಗ್ರಾಮದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಿ ಸಹಾಯಧನವನ್ನು ಸಹ ನೀಡಲಾಯಿತು.
ಮಳ್ಳೂರು ಮತ್ತು ತುಮ್ಮನಹಳ್ಳಿ ಗ್ರಾಮದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನು ಗೌರವಿಸಿ ದಿನಸಿ ಕಿಟ್ ಗಳನ್ನು ಹಾಗೂ ಸಸಿಗಳನ್ನು ನೀಡಲಾಯಿತು.
ನಗರದ ನಗರಸಭೆ ಆವರಣದಲ್ಲಿ ಪೌರಕಾರ್ಮಿಕರಿಗೆ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಸಿಬ್ಬಂದಿಗೆ ಮತ್ತು ಪೊಲೀಸರಿಗೆ ಬಿ.ಎನ್.ರವಿಕುಮಾರ್ ಅಭಿಮಾನಿಗಳು ದಿನಸಿ ಕಿಟ್ ಗಳನ್ನು ವಿತರಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಂಕ್ ಮುನಿಯಪ್ಪ, ತನುಜಾ ರಘು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಶೇಖರ್, ನಗರಸಭೆ ಸದಸ್ಯ ಲಕ್ಷ್ಮಯ್ಯ, ವೆಂಕಟಸ್ವಾಮಿ, ಮೇಲೂರು ಗ್ರಾಮ ಪಂಚಾಯಿತಿ ಸದಸ್ಯರಾದ ಆರ್.ಎ.ಉಮೇಶ್, ಶ್ರೀನಿವಾಸ್, ಡಾ.ರಮೇಶ್, ಪಿಡಿಒ ಶಾರದಾ, ದೇವರಾಜ್, ಭಾಸ್ಕರ್ ರೆಡ್ಡಿ, ಮುಖಂಡರಾದ ಎಸ್.ಎಂ.ರಮೇಶ್, ಶ್ರೀಧರ್, ಸುದರ್ಶನ್, ಪ್ರಭಾಕರ್, ಎಂ.ಆರ್.ವೀರೇಗೌಡ, ಗೋಪಾಲ್, ಎಸ್.ಆರ್.ವೆಂಕಟೇಶ್, ಸುಧೀರ್, ‌ಚರಣ್, ನಾಗರಾಜ್, ರಾಮಣ್ಣ, ಗಜೇಂದ್ರ,ಲಕ್ಷಣ್, ಮುರಳಿ ಹಾಜರಿದ್ದರು

error: Content is protected !!