Home News ಕ್ಯಾಪ್ಸಿಕಂ ಬೆಳೆಗೆ ಸೋಂಕು

ಕ್ಯಾಪ್ಸಿಕಂ ಬೆಳೆಗೆ ಸೋಂಕು

0

ಕೋವಿಡ್ ಸಂಕಷ್ಟದಲ್ಲಿರುವ ರೈತರಿಗೆ ಮತ್ತೊಂದು ಆಘಾತ ಉಂಟಾಗಿದ್ದು, ತಾಲ್ಲೂಕಿನ ಚೀಮನಹಳ್ಳಿ ಗ್ರಾಮದ  ಗೋಪಾಲ ಎಂಬ ರೈತರ ಕ್ಯಾಪ್ಸಿಕಂ ಬೆಳೆಗೆ ರೋಗ ಆವರಿಸಿದೆ.

 ಲಕ್ಷಾಂತರ ಬಂಡವಾಳ ಹೂಡಿ ಬೆಳೆದಿರುವ ಕ್ಯಾಪ್ಸಿಕಮ್ (ದೊಣ್ಣೆ ಮೆಣಸಿನಕಾಯಿ) ಬೆಳೆಗೆ ಸೋಂಕು ಕಾಣಿಸಿಕೊಂಡಿದ್ದು ರೈತರು ಆತಂಕಗೊಂಡಿದ್ದು, ಹೂಡಿರುವ‌ ಬಂಡವಾಳ ಕೈ ಗಟುಕುವುದೇ ಎಂದು ಚಿಂತಿತರಾಗಿದ್ದಾರೆ.

 ಈಗಾಗಲೇ ಕರೋನಾ ಲಾಕ್ಡೌನ್ ಅವಧಿಯಲ್ಲಿ ಬೆಳೆದಿದ್ದ ಕ್ಯಾಪ್ಸಿಕಾಮ್ ಬೆಳೆಗೆ ಸಾಗಾಣಿಕೆಗೆ ಅವಕಾಶ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದ ರೈತ ಗೋಪಾಲ್ ಇದೀಗ ವಿಚಿತ್ರ ರೋಗ ಬಂದಿದ್ದು ಅದರಿಂದಾಗಿ ಗಾಯದ ಮೇಲೆ ಬರೆ ಪರಿಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.

 ಕ್ಯಾಪ್ಸಿಕಂ ಬೆಳಗ್ಗೆ ಕೀಟಬಾಧೆಯಿಂದ ಸಂಕಷ್ಟದಲ್ಲಿ ಸಿಲುಕಿರುವ ರೈತನ ನೆರವಿಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬರಬೇಕು ಅಥವಾ ವಿಜ್ಞಾನಿಗಳು ರೈತರ ಈ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕಿದೆ ಎಂದು ಅವರು ಕೋರಿದ್ದಾರೆ.

error: Content is protected !!