Home News ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಕೋವಿಡ್ ಪ್ರತಿಜ್ಞೆ

ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಕೋವಿಡ್ ಪ್ರತಿಜ್ಞೆ

0

ಕೋವಿಡ್ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಾವುಗಳು ಎಚ್ಚರದಿಂದಿರುವುದರ ಜೊತೆಗೆ ಗ್ರಾಹಕರ ಸುರಕ್ಷತೆಗೂ ಕ್ರಮ ಕೈಗೊಂಡಿದ್ದೇವೆ ಎಂದು ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಕೃಷ್ಣಪ್ಪ ತಿಳಿಸಿದರು.

 ನಗರದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ನಲ್ಲಿ ಗುರುವಾರ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಕೋವಿಡ್ ಪ್ರತಿಜ್ಞೆ ಕೈಗೊಂಡು ಅವರು ಮಾತನಾಡಿದರು.

 ಬ್ಯಾಂಕ್ ನ ಉದ್ಯೋಗಿಗಳಾದ ನಾವುಗಳು ಎಚ್ಚರದಿಂದ ಇರುವುದರೊಂದಿಗೆ ಮಾರಕ ವೈರಾಣು ಪ್ರಸರಣವನ್ನು ತಡೆಯಲು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುತ್ತೇವೆ. ಕೋವಿಡ್ ನ ಪ್ರಮುಖ, ಸೂಕ್ತ ನಡವಳಿಕೆಗಳನ್ನು ಅನುಸರಿಸುತ್ತಾ ಇತರರಿಗೂ ಅನುಸರಿಸಲು ಪ್ರೋತ್ಸಾಹಿಸುತ್ತೇವೆ. ಸಾರ್ವಜನಿಕ ಸ್ಥಳದಲ್ಲಿದ್ದಾಗ ಮಾಸ್ಕ್ ಧರಿಸುತ್ತಾ, ಇತರರಿಂದ ಕನಿಷ್ಠ 6 ಅಡಿಗಳ ಅಂತರವನ್ನು ಕಾಪಾಡಿಕೊಳ್ಳುತ್ತೇವೆ. ಪದೇಪದೇ ಕೈಗಳನ್ನು ಸೃಚ್ಛವಾಗಿ ತೊಳೆದುಕೊಳ್ಳುತ್ತೇವೆ ಎಂಬುದಾಗಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.

 ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಮಮತಾ, ವಿಜಯ್ ಕುಮಾರ್, ತಿರುಮಲೇಶ್, ಕೆ.ಶ್ರೀಕಾಂತ್ ಹಾಜರಿದ್ದರು.

error: Content is protected !!