“ಕೊರೊನಾ ದೊಡ್ಡ ಖಾಯಿಲೆಯೇ ಅಲ್ಲ. ನೆಗಡಿ, ಕೆಮ್ಮು, ಜ್ವರ ಬಂದ ಹಾಗೆ ಬಂದು ಹೋಗುವ ಮಾಮೂಲಿ ವೈರಲ್ ಫೀವರ್ ಅಷ್ಟೇ. ಭಯಪಡುವಂತಹುದ್ದು ಏನೂ ಇಲ್ಲ. ಒಳ್ಳೆಯ ಆಹಾರ ತಿಂದು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ, ಮಾನಸಿಕ ಮತ್ತು ದೈಹಿಕವಾಗಿ ದೃಢರಾಗಿ” ಎನ್ನುತ್ತಾರೆ ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಎಲ್.ಜಮುನ ಧರ್ಮೇಂದ್ರ.
ಕೊರೊನಾ ಸೋಂಕು ತಗುಲಿದ ನಂತರ ಕೋವಿಡ್ ಕೇರ್ ಸೆಂಟರಿನಲ್ಲಿ ಎಂಟು ದಿನಗಳಿದ್ದು, ರೋಗ ಗುಣಪಡಿಸಿಕೊಂಡು ಹಿಂದಿರುಗಿರುವ ಅವರು “ನಮ್ಮ ಶಿಡ್ಲಘಟ್ಟ”ನೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡರು.