ಆಕಸ್ಮಿಕ ವಿದ್ಯುತ್ ಸ್ಪರ್ಶದಿಂದ ಎತ್ತು ಅಸುನೀಗಿದ್ದರಿಂದ, ಎತ್ತಿನಗಾಡಿಯ ಮೂಲಕ ಮನೆಮನೆಗೆ ಕುಡಿಯುವ ನೀರು ಸರಬರಾಜು ಮಾಡುವ ರಾಜೀವ್ ಗಾಂಧಿ ಲೇಔಟ್ ನ ಹಾಜೀರಾ ಅವರ ಆದಾಯ ಮೂಲವೇ ಇಲ್ಲವಾಗಿದ್ದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹತ್ತು ಸಾವಿರ ರೂಗಳ ಸಹಾಯಧನವನ್ನು ನೀಡಲಾಯಿತು.
ನಗರಸಭಾ ಸದಸ್ಯ ಬಾಬಾ ಫಕ್ರುದ್ದೀನ್, ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಮೇಲ್ವಿಚಾರಕ ಚೇತನ್, ಸೇವಾಪ್ರತಿನಿಧಿ ಅರ್ಷಿಯಾ, ಪದಾಧಿಕಾರಿ ಫರ್ಜಾನಾ ನೌಷಾದ್ ಹಾಜರಿದ್ದರು