Home News ಮಕ್ಕಳು ಸಮಾಜಕ್ಕೆ ಆಸ್ತಿಯಾಗುವಂತೆ ಬೆಳೆಸಿ

ಮಕ್ಕಳು ಸಮಾಜಕ್ಕೆ ಆಸ್ತಿಯಾಗುವಂತೆ ಬೆಳೆಸಿ

0

ತಾಲ್ಲೂಕಿನ ಬಸವಾಪಟ್ಟಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸಿದ್ದ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಸನ್ಮಾನವನ್ನು ಸ್ವೀಕರಿಸಿ ನಿವೃತ್ತ ಶಿಕ್ಷಕ ಕೆಂಪೇಗೌಡ ಮಾತನಾಡಿದರು.

 ಮಕ್ಕಳಿಗೆ ಜ್ಞಾನವನ್ನು ನೀಡಿ, ಒಳಿತು ತಪ್ಪುಗಳ ಬಗ್ಗೆ ತಿಳುವಳಿಕೆ ಮೂಡಿಸಿ. ಮಾನವತ್ವ ಅವರ ಬದುಕಿನ ಭಾಗವಾಗಲಿ. ಅಂತಹ ಮಕ್ಕಳೇ ನಿಜವಾದ ಆಸ್ತಿ. ಅವರಿಗಾಗಿ ಪೋಷಕರು ಬೇರೆ ಆಸ್ತಿ ಕೂಡಿಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.

 ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸಿ ಮತ್ತು ಸರ್ಕಾರಿ ಶಾಲೆಗಳನ್ನು ಉತ್ತಮಪಡಿಸಲು ಎಲ್ಲರೂ ಕೈಜೋಡಿಸಿ. ಪರಿಸರ ಉಳಿಸಿ ಬೆಳೆಸಲು ಎಲ್ಲರಲ್ಲೂ ಕಾಳಜಿ ಮೂಡಬೇಕಿದೆ. ನಮ್ಮ ಮನೆಗಳ ಸುತ್ತಮುತ್ತ, ಗ್ರಾಮಗಳಲ್ಲಿ ಹಸಿರನ್ನು ಬೆಳೆಸೋಣ. ಹನಿಗೂಡಿದರೆ ಹಳ್ಳ ಎಂಬಂತೆ, ಸಣ್ಣ ಸಣ್ಣ ಪ್ರಗತಿಯುತ ಕಾರ್ಯಗಳು ಮುಂದೆ ಹಿರಿದಾಗುತ್ತವೆ ಎಂದರು.

 ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ್, ತಾಲ್ಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಲಕ್ಷ್ಮಿ, ರೇಖಾ, ಸೇವಾಪ್ರತಿನಿಧಿ ಚೈತ್ರಾ ಹಾಜರಿದ್ದರು.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

error: Content is protected !!