Home News ಪರಿಶಿಷ್ಟ ಜಾತಿ ಹಾಗೂ ಪಂಗಡದ ಕಾಲೇಜು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು

ಪರಿಶಿಷ್ಟ ಜಾತಿ ಹಾಗೂ ಪಂಗಡದ ಕಾಲೇಜು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು

0
Hosapete Gram Panchayat President HM Manjunath Gowda urges villagers to take advantage of Narega and other schemes for community development.

Hosapete, Sidlaghatta : ಗ್ರಾಮ ಪಂಚಾಯಿತಿಯಿಂದ ವಿವಿಧ ಇಲಾಖೆಗಳ ಹಲವಾರು ಸವಲತ್ತುಗಳು ಸಿಗಲಿವೆ. ಆದರೆ ಸಾಕಷ್ಟು ಮಂದಿ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳುವ ಪ್ರಯತ್ನವನ್ನೂ ಸಹ ಮಾಡುವುದಿಲ್ಲ ಎಂದು ಹೊಸಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎಂ.ಮಂಜುನಾಥಗೌಡ ತಿಳಿಸಿದರು.

ಶಿಡ್ಲಘಟ್ಟ ತಾಲ್ಲೂಕಿನ ಹೊಸಪೇಟೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಸಾಮಾಜಿಕ ಪರಿಶೋಧನೆಯ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.

ನರೇಗಾದಡಿ ಸಾಕಷ್ಟು ಸವಲತ್ತುಗಳು ಗ್ರಾಮಸ್ಥರಿಗೆ ಸಿಗಲಿವೆ. ನರೇಗಾ ಯೋಜನೆ ಕುರಿತು ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾತ್ರವಲ್ಲದೆ ಗ್ರಾಮ ಪಂಚಾಯಿತಿಯ ಸದಸ್ಯರಾದ ನಾವೂ ಸಹ ಸಾಕಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಇದರಿಂದಾಗಿ ಗ್ರಾಮಗಳಲ್ಲಿ ವೈಯಕ್ತಿಕ ಹಾಗೂ ಸಮುದಾಯದ ಕಾಮಗಾರಿಗಳು ನಡೆಯುತ್ತಿದ್ದು, ಸಾಕಷ್ಟು ಅಭಿವೃದ್ದಿ ಕಾಣಬಹುದಾಗಿದೆ. ಗ್ರಾಮಸ್ಥರು ರಾಜಕೀಯವನ್ನು ಬಿಟ್ಟು ಅಭಿವೃದ್ದಿ ಯೋಜನೆಗಳ ಬಳಕೆಗೆ ಮುಂದಾಗಬೇಕೆಂದು ಮನವಿ ಮಾಡಿದರು.

ನರೇಗಾ ಹಾಗೂ 14 ಮತ್ತು 15ನೇ ಹಣಕಾಸು ಯೋಜನೆ ಇತರೆ ಯೋಜನೆಗಳ ಸಾಮಾಜಿಕ ಪರಿಶೋಧನೆ ಮಾಡಿ ಸಭೆಯಲ್ಲಿ ಮಂಡಿಸಲಾಯಿತು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್ಸಿ ಎಸ್ಟಿಯ ಪ್ರತಿಭಾವಂತ ಕಾಲೇಜು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡಲಾಯಿತು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಮ್ಮ, ಪಿಡಿಒ ಯಮುನಾರಾಣಿ, ಕಾರ್ಯದರ್ಶಿ ಸುಷ್ಮ, ಎಂ.ಟಿ.ಮಹಾಲಿಂಗಪ್ಪ, ಉಪ ವಲಯ ಅರಣ್ಯಾಧಿಕಾರಿ ಚಿತ್ರ, ಸಾಮಾಜಿಕ ಪರಿಶೋಧನೆಯ ಸಂಯೋಜಕ ಮಹೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಅಶ್ವತಪ್ಪ, ಮುನಿಆಂಜನೇಯ, ಮೀನಾಕ್ಷಿ, ರಾಜಶೇಖರ್, ಸುಶೀಲಮ್ಮ, ಮುನಿರತ್ನಮ್ಮ, ನರಸಿಂಹಮೂರ್ತಿ, ಶ್ರೀನಿವಾಸ್, ಸುರೇಶ್, ರಜಿನಿ, ಸುಜಾತ, ನಾರಾಯಣಸ್ವಾಮಿ, ಯಶೋದಮ್ಮ, ರೂಪ ಹಾಜರಿದ್ದರು.


Empowering Villagers to Take Advantage of Narega and Other Schemes

Hosapete, Sidlaghatta : At a social exploration village meeting in Sidlaghatta taluk, Hosapete Gram Panchayat President HM Manjunath Gowda emphasized the need for villagers to make an effort to learn about the projects and benefits available to them. Despite the many privileges that various departments offer through the Gram Panchayat, Gowda noted that many people fail to take advantage of them simply because they are unaware.

One of the most significant projects available to villagers is the National Rural Employment Guarantee Act (NAREGA), which offers numerous benefits to individuals and communities. Gowda praised the officers and staff who work tirelessly to promote awareness of the NAREGA scheme and encourage its use in village development projects. He also appealed to villagers to put politics aside and take advantage of these opportunities for the betterment of their communities.

During the meeting, a social survey of Narega and other schemes, including the 14th and 15th financial plans, were presented to the attendees. Financial assistance was also provided to meritorious college students from SC and ST communities under the auspices of the Gram Panchayat.

Many important officials attended the meeting, including Gram Panchayat Vice President Jayamma, PDO Yamunarani, Secretary Sushma, MT Mahalingappa, Sub Zonal Forest Officer Chitra, Social Survey Coordinator Mahesh, and Gram Panchayat Members Ashwathappa, Munianjaneya, Meenakshi, Rajasekhar, Sushilamma, Muniratnamma, Narasimhamurthy, Srinivas, Suresh, Rajini, Sujatha, Narayanaswamy, Yashodamma, and Rupa.

Overall, the meeting served as an important reminder of the many benefits and opportunities available to villagers through the Gram Panchayat. It is up to the community to take advantage of these projects and promote the growth and development of their villages.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version