Home News ಸರ್ಕಾರಿ ಶಾಲೆಯ ಮಕ್ಕಳಿಗೆ ಆಹಾರ ಧಾನ್ಯ ಹಂಚಿಕೆ

ಸರ್ಕಾರಿ ಶಾಲೆಯ ಮಕ್ಕಳಿಗೆ ಆಹಾರ ಧಾನ್ಯ ಹಂಚಿಕೆ

0

ತಾಲ್ಲೂಕಿನಾದ್ಯಂತ ವಿವಿಧ ಸರ್ಕಾರಿ ಶಾಲೆಗಳಲ್ಲಿ ಅಕ್ಷರ ದಾಸೋಹ ಇಲಾಖೆಯಿಂದ ಸರಬರಾಜಾದ ಬರಗಾಲ ಬಿಸಿಯೂಟದ ಆಹಾರ ಧಾನ್ಯಗಳನ್ನು ಮಕ್ಕಳಿಗೆ ವಿತರಿಸಲಾಯಿತು.

 ಇಲಾಖೆಯ ಆದೇಶದಂತೆ ಶಿಕ್ಷಕರು ಅಕ್ಕಿ, ಬೇಳೆ, ಗೋದಿಯನ್ನು ತೂಕ ಮಾಡಿ ಮಕ್ಕಳಿಗೆ ಹಂಚಿಕೆ ಮಾಡಿದರು. ಶಾಲೆಗೆ ಬಂದ ಮಕ್ಕಳು ಅಥವಾ ಅವರ ಪೋಷಕರಿಗೆ ಮಾಸ್ಕ್ ಧರಿಸುವಂತೆ, ಅಂತರ ಕಾಯ್ದುಕೊಳ್ಳುವಂತೆ ಶಿಕ್ಷಕರು ತಿಳಿಸುತ್ತಿದ್ದರು.

 ಕೊರೊನಾ ಸಂದರ್ಭದಲ್ಲಿ ಎಲ್ಲೆಡೆ ಆರ್ಥಿಕ ಮುಗ್ಗಟ್ಟು ತಲೆದೋರಿದೆ. ಶಾಲೆಗಳು ಕೂಡ ನಡೆಯುತ್ತಿಲ್ಲ. ಈ ಕಷ್ಟಕಾಲದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ನೀಡುತ್ತಿರುವ ಆಹಾರ ಧಾನ್ಯಗಳು ಅನುಕೂಲವಾಗಿದೆ ಎಂದು ಪೋಷಕರೊಬ್ಬರು ತಿಳಿಸಿದರು.

error: Content is protected !!