Home News ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ

ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ

Ravikumar emphasizes the need for a JDS-led government for development in the state

0
JDS leader BN Ravikumar spoke at a recent campaign event in the Sidlaghatta

Chilakalanerpu, Sidlaghatta : ಕಾಂಗ್ರೆಸ್ ಹಾಗೂ ಬಿಜೆಪಿ ನೇತೃತ್ವದ ಸರ್ಕಾರಗಳಿಂದ ರಾಜ್ಯದ ಅಭಿವೃದ್ದಿ ಅಸಾಧ್ಯ ಎಂದು ರಾಜ್ಯದ ಜನತೆಗೆ ಅರಿವಾಗಿದ್ದು ಮುಂಬರುವ ಚುನಾವಣೆಯಲ್ಲಿ ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ತರಲು ಕ್ಷೇತ್ರದ ಮುಖಂಡರೂ ಸೇರಿದಂತೆ ಕಾರ್ಯಕರ್ತರು ಮತ್ತಷ್ಟು ಶ್ರಮಿಸಬೇಕು ಎಂದು ಬಿ.ಎನ್.ರವಿಕುಮಾರ್ ಹೇಳಿದರು.

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಚಿಲಕಲನೇರ್ಪು ಹೋಬಳಿಯ ಮಿಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆ ಹಾಗೂ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಗ್ರಾಮೀಣ ಭಾಗದ ಬಡ ಜನರ ಅನುಕೂಲಕ್ಕಾಗಿ ಪಂಚರತ್ನ ಯೋಜನೆಯನ್ನು ರೂಪಿಸಿದ್ದಾರೆ. ವಸತಿ, ಆರೋಗ್ಯ, ಯುವ ನವಮಾರ್ಗ, ಮಹಿಳಾ ಸಬಲೀಕರಣ, ಶಿಕ್ಷಣ, ರೈತ ಚೈತನ್ಯ ಸೇರಿದಂತೆ, ವಿಧವಾ ವೇತನ ಹೆಚ್ಚಳ, ವೃದ್ಧಾಪ್ಯ ವೇತನ ಹೆಚ್ಚಳ, ರೈತರಿಗೆ ಪ್ರೋತ್ಸಾಹ ಧನ, ಉತ್ತಮ ಗುಣಮಟ್ಟದ ಉಚಿತ ಶಿಕ್ಷಣ, ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡುವ ಯೋಜನೆ ರೂಪಿಸಿದ್ದಾರೆ. ಈ ಹಿಂದೆ ಎರಡು ಭಾರಿ ಕುಮಾರಣ್ಣನವರು ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡ ಜನೋಪಯೋಗಿ ಕಾರ್ಯಕ್ರಮಗಳು ಸೇರಿದಂತೆ ರೈತರ ಸಾಲ ಮಾಡಿರುವ ಬಗ್ಗೆ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜನೋಪಯೋಗಿ ನಿಲುವುಗಳನ್ನು ಪ್ರತಿಯೊಬ್ಬರಿಗೂ ತಿಳಿಸುವ ಕೆಲಸ ಮುಖಂಡರು ಹಾಗು ಕಾರ್ಯಕರ್ತರು ಮಾಡಬೇಕಿದೆ ಎಂದರು.

ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದ ತುಳವನೂರು ಮುಖಂಡರು:

ಚಿಲಕಲನೇರ್ಪು ಪಂಚಾಯಿತಿ ವ್ಯಾಪ್ತಿಯ ತುಳುವನೂರಿನ ಹಲವು ಮುಖಂಡರು ಕಾಂಗ್ರೆಸ್ ತೊರೆದು ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾದರು.

ಗ್ರಾಮದ ನಿವೃತ್ತ ಮುಖ್ಯೋಪಾಧ್ಯಾಯರಾದ ಮುನಿಸ್ವಾಮಿರೆಡ್ಡಿ, ಲಕ್ಷಣರೆಡ್ಡಿ, ಎಂಪಿಸಿಎಸ್ ಅಧ್ಯಕ್ಷ ರಾಮಚಂದ್ರಾರೆಡ್ಡಿ, ಪಿಯರ್‌ಲೆಸ್ ವೆಂಕಟರೆಡ್ಡಿ, ಅಂಗಡಿ ನಾರಾಯಣಸ್ವಾಮಿ, ಜಲಗಾರಹಳ್ಳಿ ನರಸಿಂಹಪ್ಪ, ಮಠಮ್ ರಾಮಾಂಜಿ, ಕುಂಟ ಈರಪ್ಪಗಾರಿ ಆಂಜಿ, ತುಮರಕುಂಟ ಭಯಾನ್, ಹರೀಶ್, ಗಂಗುಲಪ್ಪ, ಅಶೋಕ್, ಟೈಲರ್‌ಕಿಟ್ಟಿ ಮತ್ತಿತರರು ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.


JDS leader BN Ravikumar calls for party’s victory in upcoming elections

Chilakalanerpu, Sidlaghatta : In a recent campaign event held in the Sidlaghatta Assembly Constituency, JDS party leader BN Ravikumar spoke about the importance of bringing a JDS-led government to power in the upcoming elections. Ravikumar asserted that the people of the state believe that the Congress and BJP-led governments are incapable of bringing about the necessary development in the state.

Ravikumar’s remarks came during the Pancharatna Yojana and election campaign program of the JDS party, held in the Mittahalli Gram Panchayat of Chilakalanerpu Hobli. The Pancharatna scheme, formulated by former Chief Minister HD Kumaraswamy, aims to provide benefits to poor people living in rural areas. The scheme includes initiatives such as housing, healthcare, youth reform, women’s empowerment, education, and support for farmers.

During the event, Ravikumar also emphasized the importance of informing people about the public welfare programs undertaken by former Chief Minister Bhari Kumaranna and former Prime Minister HD Deve Gowda. He urged party leaders and activists to work hard and spread awareness about these programs, which include loans for farmers and debt waivers for women’s associations.

In a significant development, many leaders of Tuluvanur, a village under the Chilakalanerpu panchayat, quit the Congress and joined the JDS party in the presence of BN Ravikumar. The retired headmasters of the village, including Muniswamy Reddy, Laksha Reddy, and others, joined the JDS along with MPCS President Ramachandra Reddy, Peerless Venkatareddy, and other prominent figures.

Overall, the event saw a strong push by the JDS to consolidate its base and attract new supporters ahead of the upcoming elections.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version