ಪೂರ್ಣ ಪುಟ · Open full page
News

ಮನೆಗಳ್ಳತನ ತಡೆಯಲು LHMS ಚಿಕ್ಕಬಳ್ಳಾಪುರ ಪೊಲೀಸ್ App

Chikkaballapur District Sidlaghatta Taluk Home security LHMS Mobile app

ಮದುವೆ, ಆಸ್ಪತ್ರೆ, ಪ್ರವಾಸ ಅಥವ ಇನ್ನಿತರ ಕಾರ್ಯಕ್ರಮಗಳಿಗೆ ಮನೆ ಮಂದಿಯೆಲ್ಲಾ ತೆರಳುವ ಸಮಯದಲ್ಲಿ ಕಳ್ಳತನ ಅಥವಾ ಮನೆ ಸುರಕ್ಷತೆಯ ಬಗ್ಗೆ ಆತಂಕಪಡುವ ಬದಲಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವತಿಯಿಂದ ಆರಂಭಿಸಿರುವ ಎಲ್ ಎಚ್ ಎಂ ಎಸ್ ಚಿಕ್ಕಬಳ್ಳಾಪುರ ಪೊಲೀಸ್ ಆಪ್‌ನ್ನು ಪ್ರತಿಯೊಬ್ಬರೂ ತಮ್ಮ ತಮ್ಮ ಮೊಬೈಲ್‌ನಲ್ಲಿ ಅಳವಡಿಸಿಕೊಳ್ಳಿ ಎಂದು ನಗರಠಾಣೆ ಪಿಎಸ್ಸೈ ಸತೀಶ್ ಮನವಿ ಮಾಡಿದರು.

ನಗರದ ಪೊಲೀಸ್ ಠಾಣೆಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲ್ಲೂಕಿನಾದ್ಯಂತ ಕಳ್ಳತನ ತಡೆಯುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಎಲ್ ಎಚ್ ಎಂ ಎಸ್ ಸೇವೆ ಪಡೆಯಲು ಬಯಸುವ ನಾಗರಿಕರು ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ಎಲ್ ಎಚ್ ಎಂ ಎಸ್ ಚಿಕ್ಕಬಳ್ಳಾಪುರ ಪೊಲೀಸ್ ಆಪ್‌ನ್ನು ಅಳವಡಿಸಿಕೊಂಡು ಪೂರ್ಣ ಮಾಹಿತಿ ಸಮೇತ ಹೆಸರು ನೋಂದಾಯಿಸಿಕೊಂಡಲ್ಲಿ ಅಂತಹವರ ಮನೆಗಳಲ್ಲಿ ಇಲಾಖೆಯಿಂದ ಮೋಷನ್ ಸೆನ್ಸಾರ್ ಕೆಮೆರಾ ಅಳವಡಿಸುವ ಮೂಲಕ ಕಳ್ಳತನಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದರು.

ಎಲ್ ಎಚ್ ಎಂ ಎಸ್ ಸೇವೆ ಸೇವೆಗೆ ಕೋರಿಕೆ ಸಲ್ಲಿಸಿದ ನಾಗರಿಕರ ಮನೆಗೆ ಇಲಾಖೆ ನೀಡುವ ಕಣ್ಗಾವಲು ಸೇವೆ ಸಂಪೂರ್ಣ ಉಚಿತವಾಗಿದ್ದು ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರಠಾಣೆಯ ಮಹಿಳಾ ಪಿಎಸ್ಸೈ ಪದ್ಮಾವತಿ, ಎಎಸ್ಸೈ ನವಾಜ್ ಅಹಮ್ಮದ್, ಪೇದೆ ರಾಜಶೇಖರ್, ಕೃಷ್ಣ ಹಾಜರಿದ್ದರು.

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

ಇದನ್ನೂ ಓದಿ

News

ಶಾಸಕ ಪ್ರದೀಪ್ ಈಶ್ವರ್ ತಮ್ಮ ನಡೆ ನುಡಿಯನ್ನು ಬದಲಿಸಿಕೊಳ್ಳಬೇಕು : ಪೂಲಕುಂಟಹಳ್ಳಿ ರಘುನಾಥರೆಡ್ಡಿ

https://youtu.be/vyGP_12zKSA Sidlaghatta : ನಾಡಪ್ರಭು ಶ್ರೀಕೆಂಪೇಗೌಡರ ಜಯಂತಿಯಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರ ಭಾಷಣಕ್ಕೆ ಅಡ್ಡಿಪಡಿಸಿದ್ದು, ಅವರ ವಿರುದ್ದ ಘೋಷಣೆಗಳನ್ನು ಕೂಗಿದ್ದು ಹಾಗೂ ಅವರ…

Share

News

ಶಿಡ್ಲಘಟ್ಟದಲ್ಲಿ ಮಧ್ಯಂತರವಾಗಿ ಅಪರ ಜಿಲ್ಲಾ ನ್ಯಾಯಾಲಯದ ನ್ಯಾಯಪೀಠಾಸನ ಸ್ಥಾಪನೆ

Sidlaghatta : ಶಿಡ್ಲಘಟ್ಟದ ನ್ಯಾಯಾಲಯದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದರಿಂದ ವಾರದಲ್ಲಿ ಮೂರು ದಿನಗಳ ಕಾಲ ಅಪರ ಜಿಲ್ಲಾ ನ್ಯಾಯಾಲಯವನ್ನು ಶಿಡ್ಲಘಟ್ಟದಲ್ಲಿ ಮಧ್ಯಂತರವಾಗಿ ನ್ಯಾಯಪೀಠಾಸನ ಕಾರ್ಯನಿರ್ವಹಿಸುವಂತೆ…

Share

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

News

ಭಾರತಾಂಬೆ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿ ಕಚೇರಿಗೆ ZP CEO ಭೇಟಿ

Sidlaghatta : ಶಿಡ್ಲಘಟ್ಟ ನಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿರುವ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ‘ಭಾರತಾಂಬೆ ಮಹಿಳಾ ಕಿಸಾನ್ ಪ್ರೊಡ್ಯೂಸರ್…

Share
Exit mobile version