Home News ಮಳ್ಳೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಮಳ್ಳೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

0
Mallur silk growers and farmers cooperative society Election

Mallur, Sidlaghatta : ಮಳ್ಳೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಮುತ್ತೂರು ಎಂ.ಎನ್.ಶ್ರೀನಿವಾಸಮೂರ್ತಿ ಹಾಗೂ ಉಪಾಧ್ಯಕ್ಷರಾಗಿ ಟಿ.ಎಸ್.ಶಶಿಕಲಾ ಲಕ್ಷ್ಮಿನಾರಾಯಣ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಹಕಾರ ಸಂಘದ ಅಧ್ಯಕ್ಷರಾಗಿದ್ದ ಎಂ.ಆರ್.ಮುನಿಕೃಷ್ಣಪ್ಪ, ಉಪಾಧ್ಯಕ್ಷರಾಗಿದ್ದ ನಿಶಾಂತ್ ರಾಜೀನಾಮೆ ನೀಡಿದ್ದ ಕಾರಣ ತೆರವಾದ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಂ.ಎನ್.ಶ್ರೀನಿವಾಸಮೂರ್ತಿ, ಉಪಾಧ್ಯಕ್ಷ ಸ್ಥಾನಕ್ಕೆ ಶಶಿಕಲಾಲಕ್ಷ್ಮೀನಾರಾಯಣ್ ಮಾತ್ರವೇ ನಾಮಪತ್ರ ಸಲ್ಲಿಸಿದ್ದರು.

ಚುನಾವಣಾಧಿಕಾರಿಗಳು ಈ ಇಬ್ಬರನ್ನು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಘೋಷಿಸಿದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಎಲ್ಲ ನಿರ್ದೇಶಕರು, ಮುಖಂಡರು, ಸಹಕಾರ ಸಂಘದ ಅಧಿಕಾರಿ, ಸಿಬ್ಬಂದಿಗಳು ಹೂ ಹಾರ ಹಾಕಿ ಶಾಲು ಹೊದಿಸಿ ಅಭಿನಂದಿಸಿದರು.

ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಎನ್.ಶ್ರೀನಿವಾಸ್‌ಮೂರ್ತಿ ಮಾತನಾಡಿ, ನನ್ನ ಮೇಲೆ ನಂಬಿಕೆಯಿಟ್ಟು ಎಲ್ಲ ನಿರ್ದೇಶಕರು ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದ್ದೀರಿ. ಸಹಕಾರ ಸಂಘ ಹಾಗೂ ರೈತರ ಶ್ರೇಯಸ್ಸು ಅಭಿವೃದ್ದಿಗಾಗಿ ನಾನು ಪ್ರಾಮಾಣಿಕವಾಗಿ ಶ್ರಮಿಸಲಿದ್ದು ನಿಮ್ಮೆಲ್ಲರ ಸಹಕಾರ ಮುಖ್ಯ ಎಂದರು.

ನಿರ್ದೇಶಕರಾದ ಜಿ.ಎಂ.ರಾಮರೆಡ್ಡಿ, ಎಂ.ಆರ್.ಮುನಿಕೃಷ್ಣಪ್ಪ, ಆರ್.ಮುರಳಿ, ಆರ್.ನಿಶಾಂತ್, ಬಿ.ಪಿ.ಹೇಮಂತ್‌ಕುಮಾರ್, ಕೆ.ಮುನಿರಾಜು, ಬಿ.ಎಂ.ವೆಂಕಟರೆಡ್ಡಿ, ಎ.ಬಿ.ನಾಗರಾಜ್, ಎನ್.ಅಣ್ಣಯ್ಯಪ್ಪ, ಆರ್.ವಿ.ರೇಣುಕಾ, ಬ್ಯಾಂಕ್‌ನ ಎಂ.ಡಿ.ಎಂ.ಎಸ್.ಮಂಜುನಾಥ್, ಮುಖಂಡರಾದ ಹಾಪ್‌ಕಾಮ್ಸ್ ಮಾಜಿ ಅಧ್ಯಕ್ಷ ಮುತ್ತೂರು ಚಂದ್ರೇಗೌಡ, ಬಿ.ವಿ.ಮುನೇಗೌಡ, ಎಸ್.ನಂಜುಂಡಾರಾಧ್ಯ, ಬಿ.ಕೆ.ರಾಮಚಂದ್ರಪ್ಪ, ಬಿ.ಚಿದಾನಂದಮೂರ್ತಿ, ಕೆ.ಸೀತಾರಾಮಯ್ಯ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version