
Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಇದ್ಲುಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಪಲ್ ಟ್ರೀ ಸಂಸ್ಥೆಯ ವತಿಯಿಂದ ನಿರ್ಮಿಸಲಾದ ಎರಡು ಸುಸಜ್ಜಿತ ಹೈಟೆಕ್ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭ ಬುಧವಾರ ನಡೆಯಿತು.
ಮಾಪಲ್ ಟ್ರೀ ಸಂಸ್ಥೆಯು ತನ್ನ ಸಾಮಾಜಿಕ ಹೊಣೆಗಾರಿಕೆ (ಸಿ.ಎಸ್.ಆರ್) ಯೋಜನೆಯಡಿ ಶಾಲೆಗೆ ಎರಡು ಆಧುನಿಕ ಹಾಗೂ ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸಿಕೊಟ್ಟಿದ್ದು, ಅವುಗಳನ್ನು ಶಾಲೆಯ ವಿದ್ಯಾರ್ಥಿಗಳ ಬಳಕೆಗೆ ಅಧಿಕೃತವಾಗಿ ಸಮರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಪಲ್ ಟ್ರೀ ಸಂಸ್ಥೆಯ ಸಂಯೋಜಕರಾದ ಶ್ರೀಗಂಧ್, ರಾಧಾಕೃಷ್ಣ ಭಾಸ್ಕರನ್, ಹರ್ಷವರ್ಧನ್ ದಿಲೀಪ್, ಅಂಕುರ್, ವಿಜಯ್ ಶಾಂತ ಹಾಗೂ ರವಿಕುಮಾರ್ ಭಾಗವಹಿಸಿ ನೂತನ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಶಾಲೆಗೆ ಹಸ್ತಾಂತರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಸನ್ನಕುಮಾರ್, ಇಸಿಒ ಮನ್ನಾರಸ್ವಾಮಿ, ಬಿ.ಆರ್.ಪಿ ಮಂಜುನಾಥ್, ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ಬೈರೇಗೌಡ ಹಾಗೂ ಸದಸ್ಯರು, ಮುಖ್ಯಶಿಕ್ಷಕ ಕೆ.ಎನ್. ನಾಗರಾಜ್, ಶಿಕ್ಷಕಿ ವಿ. ರಮಾಮಣಿ, ಗ್ರಾಮದ ಮುಖಂಡ ಡಿ.ವಿ. ಮುನಿಶ್ಯಾಮಪ್ಪ ಶಾಲೆಯ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.
In English: Maple Tree Foundation built two hi-tech classrooms at Idludu government senior primary school in Sidlaghatta taluk under its CSR initiative, formally inaugurated and handed over to students on Wednesday. Field education officer Prasannakumar and other officials attended the ceremony.