Home News ಬೋವಿ ನಗರದಲ್ಲಿ ಓಂ ಶಕ್ತಿ ಅಮ್ಮನವರ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮ

ಬೋವಿ ನಗರದಲ್ಲಿ ಓಂ ಶಕ್ತಿ ಅಮ್ಮನವರ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮ

0

ನಗರದ ಬೋವಿ ನಗರದಲ್ಲಿ ಶುಕ್ರವಾರ ಓಂ ಶಕ್ತಿ ಅಮ್ಮನವರ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜೆಡಿಎಸ್ ಮುಖಂಡ ಸಚಿನ್ ಮಾತನಾಡಿದರು.

ಪ್ರಕೃತಿ ವೈಪರೀತ್ಯಗಳು ಮತ್ತು ಕೊರೊನಾ ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಸಕಲರಿಗೂ ಒಳ್ಳೆಯದಾಗಲೆಂದು ಓಂ ಶಕ್ತಿ ಅಮ್ಮನವರ ದೇವಸ್ಥಾನ ಲೋಕಾರ್ಪಣೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

 ಜನಸಮುದಾಯ ಈಗ ಆತಂಕದ ಸನ್ನಿವೇಶದಲ್ಲಿದ್ದಾರೆ. ಒಂದೆಡೆ ಕೊರೊನಾ ಕಾಟವಾದರೆ ಮತ್ತೊಂದೆಡೆ ಪ್ರಕೃತಿ ವೈಪರೀತ್ಯಗಳು ನಾಡಿನಲ್ಲಿ ಸಂಕಷ್ಟ ತಂದಿವೆ. ಆಶಾವಾದ ಮತ್ತು ನಿರಾಶಾವಾದ ಒಂದೇ ನಾಣ್ಯದ ಎರಡು ಮುಖಗಳಂತೆ. ಬದುಕು ಬಂದ ಹಾಗೆ ಬರಲಿ ಎಂಬ ಧೈರ್ಯ ನಮ್ಮಲ್ಲಿ ಮೂಡಲು ದೈವಭಕ್ತಿ ಸಹಾಯ ಮಾಡುತ್ತದೆ. ಭಕ್ತಿಯಿಂದ ಓಂ ಶಕ್ತಿ ಅಮ್ಮನವರನ್ನು ಪ್ರಾರ್ಥಿಸೋಣ ಮತ್ತು ಸಾಕಶ್ಟು ಮುನ್ನೆಚ್ಚರಿಕೆ ವಹಿಸೋಣ ಎಂದು ಹೇಳಿದರು.

 ಎರಡನೇ ವಾರ್ಡ್ ನಗರಸಭಾ ಸದಸ್ಯ ಕೆ.ಸುರೇಶ್ ಮಾತನಾಡಿ, ಓಂ ಶಕ್ತಿ ಅಮ್ಮನವರ ದೇವಸ್ಥಾನದಿಂದ ಸುತ್ತಲಿನ ಸ್ಥಳವೆಲ್ಲಾ ಸುಸಂಸ್ಕೃತವಾಗಿ ಬದಲಾಗುತ್ತದೆ. ಮಾಸ್ಕ್ ಧರಿಸುವುದು, ಶುಚಿತ್ವ, ಅಂತರ ಪಾಲನೆ ಮಾಡುವುದರ ಜೊತೆಗೆ ತಾಯಿಯ ಆಶೀರ್ವಾದ ಕೂಡ ಇರಲಿ ಎಂಬುದು ನಮ್ಮ ಆಶಯ ಎಂದರು.

 ನಗರಸಭಾ ಸದಸ್ಯರಾದ ನಂದಕಿಶನ್, ರಾಘವೇಂದ್ರ, ಚೈತ್ರ ಮನೋಹರ್, ಮುಖಂಡರಾದ ತಾದೂರು ರಘು, ಲಕ್ಷ್ಮೀನಾರಾಯಣ, ಮಂಜುನಾಥ್ ಹಾಜರಿದ್ದರು.

error: Content is protected !!