ಪೂರ್ಣ ಪುಟ · Open full page

80 ಅಡಿ ಆಳದ ಪಾಳು ಬಾವಿಗೆ ಬಿದ್ದ ಸಾಕು ನಾಯಿ: ಅಗ್ನಿಶಾಮಕ ಸಿಬ್ಬಂದಿಯಿಂದ ಜೀವರಕ್ಷಣೆ

Fire brigade personnel, villagers and children with the rescued pet dog beside a mango grove at Pindipapanahalli

Sidlaghatta : ತಾಲ್ಲೂಕಿನ ಪಿಂಡಿಪಾಪನಹಳ್ಳಿ ಗ್ರಾಮದಲ್ಲಿ ಶಂಕರ್ ಎಂಬುವವರಿಗೆ ಸೇರಿದ ಸಾಕು ನಾಯಿಯು ಸುಮಾರು 80×30 ಅಡಿ ಆಳದ, ಮೆಟ್ಟಿಲುಗಳಿಲ್ಲದ ಪಾಳುಬಿದ್ದ ಮಣ್ಣಿನ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿತ್ತು. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ನಾಯಿಯನ್ನು ಜೀವಂತವಾಗಿ ರಕ್ಷಿಸಿ ಮಾಲೀಕರಿಗೆ ಒಪ್ಪಿಸಿದರು.

ಬಾವಿಯಿಂದ ನಾಯಿಯನ್ನು ರಕ್ಷಿಸಿದ್ದು ಹೇಗೆ?

ಅಗ್ನಿಶಾಮಕ ದಳದ ಸಿಬ್ಬಂದಿ ಹಗ್ಗಗಳು ಮತ್ತು ಹಾರ್ನೆಸ್ ಬೆಲ್ಟ್‌ನ ಸಹಾಯದಿಂದ ಬಾವಿಗೆ ಇಳಿದು, ನಾಯಿಯನ್ನು ಜೀವಂತವಾಗಿ ಮೇಲಕ್ಕೆ ತಂದು ಮಾಲೀಕರಿಗೆ ಒಪ್ಪಿಸಿದರು.

ಕಾರ್ಯಾಚರಣೆಯಲ್ಲಿ ಯಾರೆಲ್ಲಾ ಭಾಗವಹಿಸಿದ್ದರು?

ಅಗ್ನಿಶಾಮಕ ಅಧಿಕಾರಿ ದೀಪಕ್ ಕುಮಾರ್ ಜಿ., ಸಿಬ್ಬಂದಿಯಾದ ಲೋಕೇಶ್, ರಾಮಾಂಜಿನಪ್ಪ ಕೆ.ಎಂ., ಅಶೋಕ್, ರೇವಣ್ಣ, ಸಂದೀಪ್ ಮತ್ತು ಅರುಣ್ ಕೆ. ಹಾಗೂ ಗ್ರಾಮಸ್ಥರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಸಂಬಂಧಿತ ಸುದ್ದಿ: 60 ಅಡಿ ಆಳದ ಬಾವಿಗೆ ಬಿದ್ದ ನಾಯಿಯ ರಕ್ಷಣೆ | 120 ಅಡಿ ಆಳದ ಬಾವಿಗೆ ಬಿದ್ದಿದ್ದ ಕೋತಿಯ ರಕ್ಷಣೆ

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

ಇದನ್ನೂ ಓದಿ

Exit mobile version