
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಔಷಧಿ ವ್ಯಾಪಾರಿಗಳ ಸಂಘದ ಸದಸ್ಯರೊಂದಿಗೆ ಸಭೆ ನಡೆಸಿ ಸಹಾಯಕ ಔಷಧ ನಿಯಂತ್ರಕ ನಾರಾಯಣರೆಡ್ಡಿ ಮಾತನಾಡಿದರು.
ಕಳೆದ ವರ್ಷ ಕೊರೊನಾದಿಂದಾಗಿ ಪ್ರತಿಯೊಬ್ಬರಿಗೂ ಕರಾಳವಾಗಿತ್ತು. ಸಾಕಷ್ಟು ತೊಂದರೆಗಳ ನಡುವೆಯೂ ಔಷಧಿ ವ್ಯಾಪಾರಿಗಳು ಜನರಿಗೆ ಹಗಲಿರುಳು ಅಗತ್ಯ ಸೇವೆಯನ್ನು ಒದಗಿಸಿದ್ದಾರೆ. ಕೊರೊನಾ ಭಯದ ನಡುವೆಯೂ ಸೇವೆಸಲ್ಲಿಸಿರುವ ಔಷಧಿ ವ್ಯಾಪಾರಿಗಳನ್ನು ಸಹ ಕೊರೊನಾ ವಾರಿಯರ್ ಗಳೆಂದು ಗುರುತಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಔಷಧಿ ವ್ಯಾಪಾರಿಗಳಿಗೆ ಹಲವಾರು ನಿಯಮಗಳು ಮತ್ತು ನಿಬಂಧನೆಗಳಿವೆ. ಅವನ್ನು ಸಾಧ್ಯವಾದಷ್ಟೂ ಪಾಲಿಸಬೇಕು. ಸಮಾಜದಲ್ಲಿ ಗೌರವವುಳ್ಳ ವೃತ್ತಿಯಾದ ಇದರ ಘನತೆಯನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ವಿ.ಎಸ್.ವಿ.ಗುಪ್ತ, ಉಪಾಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಕೆ.ಎನ್.ರಮೇಶ್ ಬಾಬು, ಖಜಾಂಚಿ ಪಿ.ವಿ.ಮಂಜುನಾಥ್, ಜಂಟಿ ಕಾರ್ಯದರ್ಶಿ ಎಲ್.ಸುರೇಶ್, ಲಕ್ಷ್ಮಿನಾರಾಯಣಬಾಬು, ಜಗದೀಶ್, ಅಲೀಮುಲ್ಲ, ಅಂಜನಿ ಮೋಹನ್ ಹಾಜರಿದ್ದರು