Home News ದ್ವಿತೀಯ ಪಿಯುಸಿ ಫಲಿತಾಂಶ – ತೂಬಾ ನುದ್ರತ್ ಮತ್ತು ಸುಂದರೇಶ್ ತಾಲ್ಲೂಕಿಗೆ ಪ್ರಥಮ

ದ್ವಿತೀಯ ಪಿಯುಸಿ ಫಲಿತಾಂಶ – ತೂಬಾ ನುದ್ರತ್ ಮತ್ತು ಸುಂದರೇಶ್ ತಾಲ್ಲೂಕಿಗೆ ಪ್ರಥಮ

0

ದ್ವಿತೀಯ ಪಿಯುಸಿ ಫಲಿತಾಂಶ ಬಂದಿದ್ದು, ತಾಲ್ಲೂಕಿನಲ್ಲಿ ಗ್ರಾಮೀಣ, ಶ್ರಮಿಕರ, ವ್ಯವಸಾಯಗಾರರ ಮಕ್ಕಳು ಉತ್ತಮ ಅಂಕಗಳನ್ನು ಪಡೆಯುವ ಮೂಲಕ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.

 ತಾಲ್ಲೂಕಿನ ಅಂಕತಟ್ಟಿಯ ವಿದ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳಾದ ಮಸೀದಿಯ ಮೌಲ್ವಿಯ ಮಗಳು ತೂಬಾ ನುದ್ರತ್ ಮತ್ತು ಶಿಕ್ಷಕರ ಮಗ ಸುಂದರೇಶ್ 581 (96.8%) ಪಡೆದು ತಾಲ್ಲೂಕಿಗೆ ಪ್ರಥಮರಾಗಿದ್ದಾರೆ. ಬಿ.ಜಿ.ಎಸ್. ಕಾಲೇಜಿನ ಜ್ಯೋಷಿಕಾ 576 (96%), ಎಸ್.ಜಾನಕಿ 574 (95.66%), ಮಳ್ಳೂರು ಸ್ವಾಮಿ ವಿವೇಕಾನಂದ ಕಾಲೇಜಿನ ಮಗ್ಗದ ಕಸುಬಿನವರ ಮಗ ಸುಗಟೂರಿನ ಎಸ್.ಎಸ್.ಲಕ್ಷ್ಮೀಕಾಂತ್ 569 (95%), ಕಲಾ ವಿಭಾಗದಲ್ಲಿ ಕಾರ್ಮಿಕರ ಮಗ ಗೌತಮ್ ರಾಜ್ 543 (91%), ವಾಣಿಜ್ಯ ವಿಭಾಗದಲ್ಲಿ ವಾಹನ ಚಾಲಕರ ಮಗಳು ಬಿ.ಎಂ.ಪ್ರಿಯಾಂಕ ಮತ್ತು ಆಟೋ ಚಾಲಕರ ಮಗಳು ಆರ್.ತನುಶ್ರೀ 569 (95%), ಬಿ.ಜಿ.ಎಸ್. ಕಾಲೇಜಿನ ವಾಣಿಜ್ಯ ವಿಭಾಗದ ಕೃಷ್ಣವೇಣಿ 564 (94%), ಡಾಲ್ಫಿನ್ ಪಿಯು ಕಾಲೇಜಿನ ಮರಗೆಲಸದ ಕಾರ್ಮಿಕರ ಮಗಳು ತಸ್ಮಿಯಾ ಕೌಸರ್ 578 (96.33%), ವಾಣಿಜ್ಯ ವಿಭಾಗದಲ್ಲಿ ರೇಷ್ಮೆ ಕಾರ್ಮಿಕರ ಮಗಳು ಸಿಮ್ರಾನ್ ಫಿರ್ ದೌಸ್ 585 (97.5%) ಅಂಕಗಳನ್ನು ಗಳಿಸಿದ್ದಾರೆ.

error: Content is protected !!