Home News ಸಾಯಿನಾಥ ಜ್ಞಾನ ಮಂದಿರದಲ್ಲಿ ಶರನ್ನವರಾತ್ರಿ ಪೂಜಾ ಮಹೋತ್ಸವ

ಸಾಯಿನಾಥ ಜ್ಞಾನ ಮಂದಿರದಲ್ಲಿ ಶರನ್ನವರಾತ್ರಿ ಪೂಜಾ ಮಹೋತ್ಸವ

0

ತಾಲ್ಲೂಕಿನ ಮಳ್ಳೂರಿನ ಸಮೀಪದ ಸಾಯಿನಾಥ ಜ್ಞಾನ ಮಂದಿರದಲ್ಲಿ ಶರನ್ನವರಾತ್ರಿ ಮಹೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ.

 ಕಳೆದ ಶನಿವಾರದಿಂದ ಪ್ರಾರಂಭವಾದ ವಿಶೇಷ ಪೂಜಾ ಕಾರ್ಯಕ್ರಮಗಳು ಅಕ್ಟೋಬರ್ 26 ರವರೆಗೆ ನಡೆಯಲಿದೆ. ಪ್ರತಿನಿತ್ಯ ಹೋಮ, ದೇವರಿಗೆ ವಿಶೇಷ ಅಲಂಕಾರ, ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಸಲಾಗುತ್ತಿದೆ. ಶೈಲಾ ಪುತ್ರಿ ದೇವಿ ಪೂಜೆ, ಬ್ರಹ್ಮಚಾರಿಣಿ ದೇವಿ ಪೂಜೆ, ಚಂದ್ರ ಕಂಠತಿ ದೇವಿ ಪೂಜೆ, ಕೂಶ್ಮಾಂಡ ದೇವಿ ಪೂಜೆ, ಸ್ಕಂದ ಮಾತಾ ದೇವಿ ಪೂಜೆ, ಕಾತ್ಯಾಯಿನಿ ದೇವಿ ಪೂಜೆ, ಮುಂತಾದ ಪೂಜೆ ಮತ್ತು ಹೋಮಗಳು ಪ್ರತಿ ನಿತ್ಯ ನಡೆಯುತ್ತಿದೆ. ವಿಜಯದಶಮಿಯಂದು ಸಾಯಿಬಾಬಾ ಮೂರ್ತಿಗೆ ಮುತ್ತಿನ ಅಭಿಷೇಕದ ಪೂಜಾಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

error: Content is protected !!