Home News ಶಿಡ್ಲಘಟ್ಟದಲ್ಲಿ ಸಂಭ್ರಮದ ಬಕ್ರೀದ್ ಹಬ್ಬ ಆಚರಣೆ

ಶಿಡ್ಲಘಟ್ಟದಲ್ಲಿ ಸಂಭ್ರಮದ ಬಕ್ರೀದ್ ಹಬ್ಬ ಆಚರಣೆ

0
Sidlaghatta Bakrid Celebration 2026

Sidlaghatta : ತ್ಯಾಗ ಮತ್ತು ಬಲೀದಾನದ ಸಂಕೇತ ಈದ್ ಉಲ್ ಅಝ್ ಹಾ (ಬಕ್ರೀದ್) ಹಬ್ಬವನ್ನು ಸಹಸ್ರಾರು ಮುಸ್ಲಿಂ ಬಾಂಧವರು ಶುಕ್ರವಾರ ಶ್ರಧ್ಧಾಭಕ್ತಿಯಿಂದ ಆಚರಿಸಿದರು.

ಸಂಪ್ರದಾಯದಂತೆ ನಗರದ ಐತಿಹಾಸಿಕ ಜಾಮೀಯಾ ಮಸೀದಿಯ ಬಳಿ ಜಮಾಯಿಸಿದ ಮುಸ್ಲಿಂ ಸಮಾಜದವರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಬಳಿಕ ಮೀಲಾದ್ ಬಾಗ್ ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.

ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಹಬ್ಬದ ಶುಭಾಶಯಗಳು ವಿನಿಮಯ ಮಾಡಿಕೊಂಡರು ಆನಂತರ ಪೂರ್ವಜರ ಸಮಾಧಿಗಳ ಬಳಿ ತೆರಳಿ ಪುಷ್ಪ ನಮನ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು.

ಶಾಸಕ ಬಿ.ಎನ್.ರವಿಕುಮಾರ್ ಅವರು ಈದ್ಗಾ ಮೈದಾನಕ್ಕೆ ಬಂದು ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಾಶಯಗಳನ್ನು ಕೋರಿದರು. ಜಾಮಿಯಾ ಮಸೀದಿಯ ಸಮಿತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು. ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮತ್ತಿತರರು ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version