Home News ದೀನ್‌ದಯಾಳ್ ಉಪಾಧ್ಯಾಯರ ಜಯಂತಿ

ದೀನ್‌ದಯಾಳ್ ಉಪಾಧ್ಯಾಯರ ಜಯಂತಿ

0

ನಗರದ ಬಿಜೆಪಿ ಕಚೇರಿಯಲ್ಲಿ ಹಾಗೂ ಬೆಳ್ಳೂಟಿ ಗೇಟ್ ಬಳಿಯ ನಾರ್ಥ್ ಈಸ್ಟ್ ಸುರೇಶ್ ಅವರ ಕಚೇರಿಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಬಿಜೆಪಿ ಪಕ್ಷದ ನಗರ ಹಾಗೂ ಗ್ರಾಮೀಣ ಮಂಡಲದಿಂದ ಶುಕ್ರವಾರ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಈಚೆಗೆ ನಿಧನರಾದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

 ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಎಸ್.ರಾಘವೇಂದ್ರ, ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಅರಿಕೆರೆ ಮುನಿರಾಜು ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರ ಜೀವನ, ಆದರ್ಶ, ಧ್ಯೇಯಗಳ ಕುರಿತಂತೆ ಮಾತನಾಡಿದರು.

 ಸರಳ ಜೀವಿಯಾಗಿದ್ದ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಅವರ ಸಮಾಜ ಸೇವೆ, ಜನಪರ ಕಾಳಜಿ, ಜನರಿಗಾಗಿ ದುಡಿಯುವ ಮೂಲಕ ಉತ್ತಮ ಸೇವೆ ಯನ್ನು ಸಲ್ಲಿಸಿದ್ದು ವಿದ್ಯಾರ್ಥಿಗಳು ಸೇರಿದಂತೆ ನಾಗರೀಕರು ಅವರ ಆದರ್ಶವನ್ನು ನೆನೆಪಿಸಿಕೊಳ್ಳಬೇಕು ಎಂದರು.

  ಮಹಿಳಾ ಮೋರ್ಚಾ ಅಧ್ಯಕ್ಷೆ ತ್ರಿವೇಣಿ, ಪ್ರಧಾನ ಕಾರ್ಯದರ್ಶಿ ಅಶ್ವಿನಿ, ಮಂಜುಳ, ಕೆ.ರೇಖಾ, ಲಕ್ಷ್ಮಮ್ಮ, ಮಾಜಿ ಶಾಸಕ ಎಂ.ರಾಜಣ್ಣ, ರಮೇಶ್‌ಬಾಯಿರಿ, ಆಂಜನೇಯಗೌಡ, ನರೇಶ್, ದೇವರಾಜ್, ಮುಖೇಶ್, ಸುಜಾತಮ್ಮ, ನಟರಾಜ್, ದಾಮೋದರ್, ರಾಮಚಂದ್ರ, ನರಸಿಂಹಯ್ಯ, ಅಂಬರೀಶ್, ಲಿಂಗಣ್ಣ ಹಾಜರಿದ್ದರು.

error: Content is protected !!