Home News ಕ್ಯಾಂಟರ್ ಗಳ ಡಿಕ್ಕಿ

ಕ್ಯಾಂಟರ್ ಗಳ ಡಿಕ್ಕಿ

0
Sidlaghatta Canter Accident

Sidlaghatta : ಒಂದರಿಂದ ಮತ್ತೊಂದು ಮುಂದಕ್ಕೆ ಹೋಗುವ ಭರದಲ್ಲಿ ಎರಡು ಕ್ಯಾಂಟರ್ ಗಳ ನಡುವೆ ಡಿಕ್ಕಿಯಾಗಿ ಕ್ಯಾಂಟರ್ ಗಳು ಮುಗುಚಿ ಬಿದ್ದಿವೆ.

ನಗರದ ಹೊರವಲಯದ ಅಮ್ಮನಕೆರೆಯ ಕಟ್ಟೆಯ ಮೇಲೆ ಭಾನುಮಾರ ಮುಂಜಾನೆ ಈ ದುರ್ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಶಿರಾ ದಿಂದ ಚಿಂತಾಮಣಿ ಕಡೆಗೆ ತೆರಳುತ್ತಿದ್ದ ಕ್ಯಾಂಟ‌ರ್ ಳ ನಡುವೆ ನಡೆದ ಈ ಅಪಘಾತದಲ್ಲಿ ಒಂದು ಕ್ಯಾಂಟರ್ ರಸ್ತೆಯ ಮೇಲೆ ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಚಾಲಕರಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಈ ಅಪಘಾತದಿಂದಾಗಿ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯುಂಟಾಯಿತು.

ಪೊಲೀಸರು ಸ್ಥಳಕ್ಕೆ ಆಗಮಿಸಿ ಕ್ರೇನ್ ಗಳನ್ನು ತರಿಸಿ ವಾಹಗಳನ್ನು ತೆರವು ಮಾಡಿಸಿದರು. ಅದುವರೆಗೂ ಒಮ್ಮುಖ ರಸ್ತೆಯಲ್ಲಿ ವಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version