Home News ಸಮಗ್ರ ತೋಟಗಾರಿಕೆ ಮಾಹಿತಿ ಕಾರ್ಯಕ್ರಮ

ಸಮಗ್ರ ತೋಟಗಾರಿಕೆ ಮಾಹಿತಿ ಕಾರ್ಯಕ್ರಮ

0

ಸಣ್ಣ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ದೂರದ ಮಾರುಕಟ್ಟೆಗೆ ಬೆಳೆದ ಬೆಳೆಯನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ರೈತರು ಗ್ರಾಮದಲ್ಲಿ ಒಟ್ಟಾಗಿ ಗುಂಪನ್ನು ರಚಿಸಿಕೊಂಡು ಗುಂಪಿನಲ್ಲಿ ಒಬ್ಬರನ್ನು ಆಯ್ಕೆಯನ್ನು ಮಾಡಿಕೊಂಡು ದೂರದ ಚೆನ್ನೈ ಅಥವಾ ಹೈದರಾಬಾದ್  ಮಾರುಕಟ್ಟೆಯನ್ನು ಭೇಟಿ ಮಾಡಿ ಮಾರುಕಟ್ಟೆ ಮಾಡಿದರೆ ಉತ್ತಮ ಬೆಲೆ ಪಡೆಯಬಹುದೆಂದು ತೋಟಗಾರಿಕಾ ಇಲಾಖೆಯ ಅಧಿಕಾರಿ ಕೀರ್ತಿ ತಿಳಿಸಿದರು.

 ಬಶೆಟ್ಟಹಳ್ಳಿ ಹೋಬಳಿಯ ರಾಯಪ್ಪನಹಳ್ಳಿಯ ಪ್ರಗತಿಪರ ಕೃಷಿಕ ಸತೀಶ್ ನಾರಾಯಣರೆಡ್ಡಿ ಅವರ ತೋಟದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಸಮಗ್ರ ತೋಟಗಾರಿಕಾ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 ರೈತರು ಉತ್ತಮ ಬೆಳೆಗಳನ್ನು ಬೆಳೆಯುತ್ತಾರೆ. ಆದರೆ ಮಾರುಕಟ್ಟೆಯನ್ನು ಸರಿಯಾದ ರೀತಿಯಲ್ಲಿ ಸರಿಯಾದ ಸಮಯಕ್ಕೆ ಮಾಡುವುದಿಲ್ಲ. ಆದ್ದರಿಂದ ಬರುವ ಲಾಭ ಎಲ್ಲವೂ ದಲ್ಲಾಳಿಗಳ ಪಾಲಾಗುತ್ತಿದೆ. ಇದನ್ನು ತಪ್ಪಿಸಬೇಕಾದರೆ ಸೂಕ್ತ ದಾಸ್ತಾನು ವ್ಯವಸ್ಥೆಯನ್ನು ಮಾಡಿಕೊಂಡು, ಬೆಳೆಗಳನ್ನು ಉತ್ತಮ ಬೆಲೆ ಬರುವ ತನಕ ದಾಸ್ತಾನು ಮಾಡಿದರೆ ಹೆಚ್ಚು ಆದಾಯವನ್ನು ಗಳಿಸಬಹುದು ಎಂದರು.

 ತೋಟಗಾರಿಕಾ ಬೆಳಗಳಲ್ಲಿ ಅಲ್ಪಾವಧಿ ಬೆಳೆ ಹಾಗೂ ದೀರ್ಘಾವಧಿ ಬೆಳೆಗಳಿದ್ದು ಯಾವುದೇ ಬೆಳೆಗಳನ್ನು ಬೆಳೆಯುವ ಮೊದಲು ಮಣ್ಣು ಪರೀಕ್ಷೆ ಮಾಡುವುದು ಬಹುಮುಖ್ಯ ಎಂದು ಸಲಹೆ ನೀಡಿ, ತೋಟಗಾರಿಕೆ ಇಲಾಖೆಯಿಂದ ರೈತರಿಗೆ ದೊರಕುವ ಸಹಾಯಧನಗಳ ಬಗ್ಗೆ ಮಾಹಿತಿ ನೀಡಿದರು.

 ಗ್ರಾಮ ಪಂಚಾಯಿತಿ ಸದಸ್ಯ ಚೌಡರೆಡ್ಡಿ ಮಾತನಾಡಿ, ಧರ್ಮಸ್ಥಳ ಸಂಸ್ಥೆಯವರು ದೇವಸ್ಥಾನ ಜೀರ್ಣೋದ್ದಾರ ಕಾರ್ಯಕ್ರಮ, ಕೆರೆಯನ್ನು ಹೂಳೆತ್ತುವ ಕಾರ್ಯಕ್ರಮ, ಹಾಲಿನ ಡೈರಿಗಳಿಗೆ ಸಹಾಯಧನ ವಿತರಿಸುವುದು ಹಾಗೂ ಇನ್ನಿತರ ಹಲವಾರು ಕಾರ್ಯಕ್ರಮವನ್ನು ಮಾಡುವ ಮೂಲಕ ಗ್ರಾಮೋದ್ಧಾರದ ಕಾರ್ಯ ನಡೆಸಿದೆ ಎಂದರು.

ಒಕ್ಕೂಟದ ಅಧ್ಯಕ್ಷ ಮಂಜುನಾಥ್, ಸೇವಾಪ್ರತಿನಿಧಿ ಶಫೀವುಲ್ಲಾ, ಕೃಷಿ ಮೇಲ್ವಚಾರಕ ಹರೀಶ್‌ಕುಮಾರ್, ಸೇವಾಪ್ರತಿನಿಧಿ ನಾರಾಯಣಸ್ವಾಮಿ ಹಾಜರಿದ್ದರು.

error: Content is protected !!