Home News ಕೆ.ಎಚ್.ಮುನಿಯಪ್ಪರವರ ಜನ್ಮದಿನಾಚರಣೆ

ಕೆ.ಎಚ್.ಮುನಿಯಪ್ಪರವರ ಜನ್ಮದಿನಾಚರಣೆ

0
Sidlaghatta K H Muniyappa Birthday

ಶಿಡ್ಲಘಟ್ಟ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾಜಿ ಸಂಸದ ಕೆ.ಎಚ್.ಮುನಿಯಪ್ಪರವರ 74 ನೇ ಜನ್ಮ ದಿನದ ಅಂಗವಾಗಿ ಸೋಮವಾರ ಅವರ ಅಭಿಮಾನಿಗಳೊಂದಿಗೆ ಆಸ್ಪತ್ರೆಯಲ್ಲಿನ ಹೊರ ರೋಗಿಗಳಿಗೆ ಹಣ್ಣು ಬ್ರೆಡ್ ವಿತರಿಸಿ ಗುಡಿಹಳ್ಳಿ ನಾರಾಯಣಸ್ವಾಮಿ (ಬಂಗಾರಪ್ಪ) ಮಾತನಾಡಿದರು.

ತಾಲ್ಲೂಕಿನ ಕಂಬದಹಳ್ಳಿ ಗ್ರಾಮದಲ್ಲಿ ಜನಿಸಿದ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ರವರ ಸೇವೆ ಅಪಾರವಾಗಿದೆ. ಕೆ.ಎಚ್.ಮುನಿಯಪ್ಪರವರು ಸತತ 7 ಭಾರಿ ಸಂಸದರಾಗಿ ತಾಲ್ಲೂಕಿನಲ್ಲಿ ಜನ ಮೆಚ್ಚಿದ ನಾಯಕರಾಗಿದ್ದಾರೆ. ಅವರ ಜನ್ಮ ದಿನವನ್ನು ಸರಳವಾಗಿ ಆಚರಿಸುತ್ತಿದ್ದೇವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತೀರುವ ರೋಗಿಗಳು ಶೀಘ್ರದಲ್ಲಿ ಗುಣಮುಖರಾಗಬೇಕೆಂದು ಅವರು ಕೋರಿದರು.

 ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ ಮೂರ್ತಿ, ರಾಜ್ಯ ಎನ್.ಎಸ್.ಯು.ಐ ಮಾಜಿ ಸಂಚಾಲಕ ಮುನೀಂದ್ರ, ಗಿರೀಶ್, ನರಸಿಂಹ(ಎನ್.ಟಿ.ಆರ್), ಗುಡಿಹಳ್ಳಿ ನಾರಾಯಣಸ್ವಾಮಿ, ಕೋಟಹಳ್ಳಿ ಮುನಿರಾಜು, ರವಿ, ಅತಾವುಲ್ಲಾ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version