Home News ಪದಕಗಳನ್ನು ಗೆದ್ದ ದಿವ್ಯಭಾರತ್ ಕರಾಟೆಪಟುಗಳು

ಪದಕಗಳನ್ನು ಗೆದ್ದ ದಿವ್ಯಭಾರತ್ ಕರಾಟೆಪಟುಗಳು

0

ಆಂಧ್ರದ ವಿಜಯವಾಡದ ಸ್ಕೂಲ್ ಆಫ್ ಡೈನಮಿಕ್ ಕರಾಟೆ ಸಂಸ್ಥೆಯವರು ಆಯೋಜಿಸಿದ್ದ ದಕ್ಷಿಣ ಭಾರತ ಓಪನ್ ಈ ಕತಾ ಕರಾಟೆ ಚಾಂಪಿಯನ್ ಷಿಪ್ ನ ಆನ್ ಲೈನ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶಿಡ್ಲಘಟ್ಟದ ದಿವ್ಯಭಾರತ್ ಕರಾಟೆ ವಿದ್ಯಾರ್ಥಿಗಳು ಪದಕಗಳನ್ನು ಗೆದ್ದಿದ್ದಾರೆ.
 ಎಸ್.ನಿಶ್ಚಿತ್ (ವರ್ಷ – ಆರೆಂಜ್ ಬೆಲ್ಟ್), ಕೆ.ವಿ.ಶ್ರೀಕರ್ (12 ವರ್ಷ – ಆರೆಂಜ್ ಬೆಲ್ಟ್), ಎಂ.ಭವನೇಶ್ (10 ವರ್ಷ – ಗ್ರೀನ್ ಬೆಲ್ಟ್), ಡಿ.ಶಿರಿಶ್ ತೇಜ್ (10 ವರ್ಷ – ಗ್ರೀನ್ ಬೆಲ್ಟ್) ಮತ್ತು ಎಚ್.ಓಜಸ್ (13 ವರ್ಷ – ಬ್ಲೂ ಬೆಲ್ಟ್) ಚಿನ್ನದ ಪದಕಗಳನ್ನು ಪಡೆದಿದ್ದಾರೆ, ಟಿ.ಜೆ.ಹರ್ಷಿತ್ (14 ವರ್ಷ – ಬ್ರೌನ್ 2 ಬೆಲ್ಟ್) ಮತ್ತು ಎ.ಜಯಸಿಂಹ (15 ವರ್ಷ – ಬ್ರೌನ್ 4 ಬೆಲ್ಟ್) ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ ಎಂದು ದಿವ್ಯಭಾರತ್ ಕರಾಟೆ ಸಂಸ್ಥೆಯ ಶಿಕ್ಷಕ ಅರುಣ್ ಕುಮಾರ್ ತಿಳಿಸಿದ್ದಾರೆ.