Home News ನಗರಸಭೆಯ ವಸೂಲಾತಿ ಹಕ್ಕಿನ ಬಹಿರಂಗ ಹರಾಜು

ನಗರಸಭೆಯ ವಸೂಲಾತಿ ಹಕ್ಕಿನ ಬಹಿರಂಗ ಹರಾಜು

0
Sidlaghatta Municipality Auction 2026

Sidlaghatta : ಶಿಡ್ಲಘಟ್ಟದ ನಗರಸಭೆಗೆ ಸೇರಿದ ಸಂತೆ ಮಾರುಕಟ್ಟೆ, ದಿನವಹಿ ಮಾರುಕಟ್ಟೆ, ಖಾಸಗಿ ಬಸ್ಸುಗಳ ವಾಹನಗಳ ನಿಲ್ದಾಣದ ಶುಲ್ಕ, ಒಳಚರಂಡಿ ಶುದ್ಧೀಕರಣ ಘಟಕದ ಶುಲ್ಕ – ಇವುಗಳ 2026-27ನೇ ಸಾಲಿನ ವಾರ್ಷಿಕ ವಸೂಲಾತಿ ಹಕ್ಕನ್ನು ಗುರುವಾರ ನಗರಸಭೆ ಸಮುದಾಯ ಭವನದಲ್ಲಿ ಬಹಿರಂಗ ಹರಾಜು ನಡೆಸಲಾಯಿತು.

ಸಂತೆ ಮಾರುಕಟ್ಟೆ ಯನ್ನು ನವೀನ್ ಕುಮಾರ್ ಅವರು ಹರಾಜನಲ್ಲಿ 3,91,000 ಸಾವಿರ ರೂಪಾಯಿಗಳಿಗೆ ಹರಾಜು ಕೂಗಿದರು. ದಿನವಹಿ ಮಾರುಕಟ್ಟೆಯನ್ನು ಅಂಬರೀಶ್ 4,70,000 ಸಾವಿರ ರೂಪಾಯಿಗಳಿಗೆ ಮತ್ತು ಖಾಸಗಿ ಬಸ್ಸುಗಳ ವಾಹನಗಳ ನಿಲ್ದಾಣದ ಶುಲ್ಕ ವಸೂಲಿಯನ್ನು ನರಸಿಂಹ 4,06,000 ರೂಪಾಯಿಗಳಿಗೆ ಹರಾಜು ಕೂಗಿದರು.

ನಗರಸಭೆ ಪೌರಾಯುಕ್ತೆ ಜಿ.ಅಮೃತಾ ಮಾತನಾಡಿ, “ಕಳೆದ ವರ್ಷ ಸಂತೆ ಮಾರುಕಟ್ಟೆ, ದಿನವಹಿ ಮಾರುಕಟ್ಟೆ, ಖಾಸಗಿ ಬಸ್ಸುಗಳ ವಾಹನಗಳ ನಿಲ್ದಾಣದ ಶುಲ್ಕ ಹರಾಜಿನಿಂದ 8,70,000 ರೂ ಆದಾಯ ಬಂದಿತ್ತು. ಈ ಬಾರಿ 12,67,000 ರೂ ಆದಾಯ ಬರುತ್ತಿದೆ. ಹಾಗಾಗಿ ಸುಮಾರು ನಾಲ್ಕು ಲಕ್ಷ ರೂಗಳಷ್ಟು ಆದಾಯ ನಗರಸಭೆಗೆ ಹೆಚ್ಚಾಗಿದೆ. ಒಳಚರಂಡಿ ಶುದ್ಧೀಕರಣ ಘಟಕದ ಶುಲ್ಕದ ಮರುಹರಾಜನನ್ನು ಆನ್ ಲೈನ್ ಮೂಲಕ ಟೆಂಡರ್ ಕರೆಯುತ್ತೇವೆ” ಎಂದು ಹೇಳಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version