Home News ಕಳುವಾಗಿದ್ದ ವಾಹನಗಳ ಪತ್ತೆ

ಕಳುವಾಗಿದ್ದ ವಾಹನಗಳ ಪತ್ತೆ

0
Sidlaghatta Police Theft Vehicles seized

Sidlaghatta : ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಕಳುವಾಗಿದ್ದ ನಾಲ್ಕು ದ್ವಿಚಕ್ರ ವಾಹನಗಳನ್ನು ಮತ್ತು ಒಂದು ಟ್ರಾಲಿಯನ್ನು ವಶಕ್ಕೆ ಪಡೆದಿದ್ದಾರೆ.

ಮೊಹಮ್ಮದ್ ಯೂಸುಫ್ ಎಂಬುವವರು ನಗರದ ಇಂದಿರಾ ಕ್ಯಾಂಟೀನ್ ಬಳಿ ನಿಲ್ಲಿಸಿದ್ದ ತನ್ನ ದ್ವಿಚಕ್ರ ವಾಹನ ಕಳ್ಳತನವಾಗಿದೆಯೆಂಬ ದೂರು ನೀಡಿದ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ನಗರ ಠಾಣೆಯ ಪೊಲೀಸರು, ಕೋಲಾರ ಜಿಲ್ಲೆಯ ಕ್ಯಾಸಂಬಳ್ಳಿ ಹೋಬಳಿಯ ಚಿನ್ನಕೊತ್ತೂರು ಗ್ರಾಮದ ಎಸ್.ಕುಮಾರ್(23) ಎಂಬುವನನ್ನು ವಶಕ್ಕೆ ಪಡೆದು ಅವನು ಕಳ್ಳತನ ಮಾಡಿದ್ದ ನಾಲ್ಕು ದ್ವಿಚಕ್ರ ವಾಹನಗಳನ್ನು ಮತ್ತು ಒಂದು ಟ್ರಾಲಿಯನ್ನು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version