Home News ರೈಲ್ವೆ ಇಲಾಖೆಯಿಂದ ಕೆಳಸೇತುವೆಗಳ ದುರಸ್ತಿಗೆ ಒಪ್ಪಿಗೆ

ರೈಲ್ವೆ ಇಲಾಖೆಯಿಂದ ಕೆಳಸೇತುವೆಗಳ ದುರಸ್ತಿಗೆ ಒಪ್ಪಿಗೆ

0
Sidlaghatta Railway Underpass Repair

ಶಿಡ್ಲಘಟ್ಟ ನಗರದ ಇದ್ಲೂಡು ರಸ್ತೆಯಲ್ಲಿನ ಕೆಳಸೇತುವೆ ಹಾಗೂ ತಾಲ್ಲೂಕು ಕಚೇರಿಗೆ ತೆರಳುವ ಹಾದಿಯಲ್ಲಿನ ಕೆಳಸೇತುವೆಗಳನ್ನು ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಸಮಸ್ಯೆಯನ್ನು ಅವರೊಂದಿಗೆ ಚರ್ಚಿಸಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.

ನಗರ ಸೇರಿದಂತೆ ತಾಲ್ಲೂಕಿನ ವಿವಿದೆಡೆ ಇರುವ ಕೆಳಸೇತುವೆಗಳೆಲ್ಲಾ ಮಳೆ ಬಂದರೆ ಸಾಕು ರೈಲ್ವೆ ನೀರು ತುಂಬಿಕೊಂಡು ಜನರು ಓಡಾಡಲು ಕಷ್ಟವಾಗುತ್ತದೆ. ಹಲವೆಡೆ ಅಪಘಾತವಾಗಿರುವ ವಿಷಯಗಳೂ ತಿಳಿದುಬಂದಿದೆ. ನೀರು ನಿಲ್ಲುವುದರಿಂದ ಅಲ್ಲಿ ರಸ್ತೆಯೆಲ್ಲಾ ಹಾಳಾಗಿದೆ. ಇದನ್ನೆಲ್ಲಾ ರೈಲ್ವೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿರುವೆ. ಮುಂದಿನ ಸೋಮವಾರದಿಂದಲೇ ದುರಸ್ತಿ ಕಾರ್ಯವನ್ನು ಮಾಡುತ್ತೇವೆಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ  ಅವರು ತಿಳಿಸಿದ್ದಾರೆ ಎಂದು ಅವರು ತಿಳಿಸಿದರು.

 ರೈಲ್ವೆ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಶಿವಕುಮಾರ್ ಮಾತನಾಡಿ, ಅತಿ ಶೀಘ್ರವಾಗಿ ಕೆಳಸೇತುವೆ ದುರಸ್ತಿ ಕಾರ್ಯ ಮಾಡುತ್ತೇವೆ. ಎಲ್ಲೆಲ್ಲಿ ಕೆಳಸೇತುವೆಗಳಲ್ಲಿ ಹೆಚ್ಚೆಚ್ಚು ನೀರು ತುಂಬಿಕೊಳ್ಳುತ್ತದೆಯೋ ಅಲ್ಲಿನ ನಗರಸಭೆ ಅಥವಾ ಗ್ರಾಮ ಪಂಚಾಯಿತಿಗಳಿಗೆ ಮೋಟರ್ ನೀಡುತ್ತೇವೆ. ಅವರು ಶೀಘ್ರವಾಗಿ ನೀರನ್ನು ಹೊರಕ್ಕೆ ಪಂಪ್ ಮಾಡಬಹುದು ಎಂದರು.

 ನಗರಸಭೆ ಪೌರಾಯುಕ್ತ ಶ್ರೀಕಾಂತ್, ಅಧ್ಯಕ್ಷೆ ಸುಮಿತ್ರ ರಮೇಶ್, ಉಪಾಧ್ಯಕ್ಷ ಅಫ್ಸರ್ ಪಾಷ, ಗುತ್ತಿಗೆದಾರ ಪ್ರಸನ್ ಶೆಟ್ಟಿ ಹಾಜರಿದ್ದರು.

 

Like, Follow, Share ನಮ್ಮ ಶಿಡ್ಲಘಟ್ಟ

Facebook: https://www.facebook.com/sidlaghatta

Instagram: https://www.instagram.com/sidlaghatta

Telegram: https://t.me/Sidlaghatta

Twitter: https://twitter.com/hisidlaghatta

ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:

WhatsApp: https://wa.me/917406303366?text=Hi

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version