Home News ಬೀದಿ ನಾಯಿಗಳ ದಾಳಿಗೆ 11 ವರ್ಷದ ಬಾಲಕ ಬಲಿ

ಬೀದಿ ನಾಯಿಗಳ ದಾಳಿಗೆ 11 ವರ್ಷದ ಬಾಲಕ ಬಲಿ

0
stray dogs kill boy sidlaghatta

ಬೀದಿ ನಾಯಿಗಳ ದಾಳಿಗೆ 11 ವರ್ಷದ ಬಾಲಕನೋರ್ವ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ನಗರದಲ್ಲಿ ಭಾನುವಾರ ನಡೆದಿದೆ.

ಖಲಂದರ್‌ಖಾನ್ (11)

ಶಿಡ್ಲಘಟ್ಟ ನಗರದ ಸಂತೋಷನಗರದ ಬಾಬಾಜಾನ್ ಎಂಬುವವರ ಮಗ ಖಲಂದರ್‌ಖಾನ್ (11) ನಾಯಿ ದಾಳಿಗೆ ಬಲಿಯಾದ ಬಾಲಕನಾಗಿದ್ದಾನೆ. ಅಂಗಡಿ ಬಳಿ ಹೋಗಿದ್ದ ತಂದೆಯನ್ನು ಹುಡುಕಿಕೊಂಡು ಹೋಗಿದ್ದ ಬಾಲಕನ ಮೇಲೆ ಹತ್ತಕ್ಕೂ ಹೆಚ್ಚು ನಾಯಿಗಳು ಒಂದೇ ಸಮ ದಾಳಿ ಮಾಡಿದ ಹಿನ್ನಲೆಯಲ್ಲಿ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಸ್ಥಳಕ್ಕೆ ಪೊಲೀಸರು ಹಾಗು ನಗರಸಭೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡಿಸಿದ್ದಾರೆ.

ನಗರದಾಧ್ಯಂತ ಎಲ್ಲಂದಿರಲ್ಲಿ ತಲೆಯೆತ್ತಿರುವ ಮಾಂಸದ ಅಂಗಡಿಗಳವರು ಎಸೆಯುವ ಮಾಂಸದ ತ್ಯಾಜ್ಯವನ್ನು ತಿಂದು ಕೊಬಬಿರುವ ಬೀದಿ ನಾಯಿಗಳು ರಸ್ತೆಯಲ್ಲಿ ಓಡಾಡುವ ಮಕ್ಕಳ ಮೇಲೆ ದಾಳಿ ನಡೆಸುತ್ತವೆ. ಇದೇ ರೀತಿ ನಾಯಿಗಳು ಕಚ್ಚಿದ ಸಾಕಷ್ಟು ಘಟನೆಗಳಾಗಿದ್ದರೂ ತಾಲೂಕು ಆಡಳಿತ, ನಗರಸಭೆಯವರು ಎಚ್ಚೆತ್ತುಕೊಳ್ಳದೇ ಇದ್ದುದೇ ಘಟನೆಗೆ ಕಾರಣವಾಗಿದೆ. ಕೂಡಲೇ ಅನಧಿಕೃತವಾಗಗಿ ರಸ್ತೆ ಬದಿಯಲ್ಲಿ ತೆರೆದಿರುವ ಮಾಂಸದ ಅಂಗಡಿಗಳನ್ನು ಮುಚ್ಚಿಸುವುದು ಸೇರಿದಂತೆ ಬೀದಿ ನಾಯಿಗಳನ್ನು ಹಿಡಿಯುವ ಕೆಲಸಕ್ಕೆ ನಗರಸಭೆ ಮುಂದಾಗಬೇಕು ಎಂದು ನಾಗರೀಕರು ಒತ್ತಾಯಿಸಿದ್ದಾರೆ.

ಬೀದಿ ನಾಯಿಗಳ ದಾಳಿಗೆ ತುತ್ತಾಗಿ ಮೃತಪಟ್ಟಿರುವ ಬಾಲಕ ಖಲಂದರ್ ಖಾನ್ ಮನೆಗೆ ಭೇಟಿ ನೀಡಿದ ಎಬಿಡಿ ಸಂಸ್ಥೆಯ ಅಧ್ಯಕ್ಷ ರಾಜೀವ್‌ಗೌಡ ಪೋಷಕರಿಗೆ ಸಾಂತ್ವಾನ ಹೇಳುವ ಜೊತೆಗೆ ೨೫ ಸಾವಿರ ರೂಗಳ ಚೆಕ್ ವಿತರಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version