
Sidlaghatta : 025-26 ಶಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಶಿಡ್ಲಘಟ್ಟ ನಗರದ ಎ ಆರ್ ಎಂ ಪಿಯು ಕಾಲೇಜಿನ ಚೇತನ ಎಸ್ ವಿಜ್ಞಾನ ವಿಭಾಗದಲ್ಲಿ 590 (98%) ಅಂಕಗಳನ್ನು ಪಡೆದು ರಾಜ್ಯಕ್ಕೆ 8ನೇ ಸ್ಥಾನ ಮತ್ತು ಜಿಲ್ಲೆಗೆ ತೃತಿಯ ಹಾಗೂ ತಾಲ್ಲೂಕಿಗೆ ಪ್ರಥಮರಾಗಿದ್ದರೆ. ಚೇತನಾಳ ತಂದೆಯು ಆಟೋ ಚಾಲಕರಾಗಿದ್ದು, ಬಡತನದಲ್ಲಿಯೂ ಮಗಳ ವಿದ್ಯಾಭ್ಯಾಸಕ್ಕೆ ಪ್ರೇರಣೆ ನೀಡಿ ಮಾದರಿಯಾಗಿದ್ದಾರೆ.
ಅದೇ ಎ ಆರ್ ಎಂ ಪಿಯು ಕಾಲೇಜಿನ ಪೃಥ್ವಿ ವಾಣಿಜ್ಯ ವಿಭಾಗದಲ್ಲಿ 590 (98%) ಅಂಕಗಳನ್ನು ಪಡೆದು ರಾಜ್ಯಕ್ಕೆ 8ನೇ ಸ್ಥಾನ, ಜಿಲ್ಲೆಗೆ ದ್ವಿತೀಯ ಹಾಗೂ ತಾಲ್ಲೂಕಿಗೆ ಪ್ರಥಮರಾಗಿದ್ದರೆ. ಪೃಥ್ವಿ ಯು ರೈತ ಕುಟುಂಬದ ಹಿನ್ನೆಲೆಯವರಾಗಿದ್ದಾರೆ.
ನಗರದ ಡಾಲ್ಫಿನ್ಸ್ ಪಿಯು ಕಾಲೇಜಿನ ಆಯೆಶಾ ನಿಶಾದ್ ವಾಣಿಜ್ಯ ವಿಭಾಗದಲ್ಲಿ 587 (97.8%), ಮುಸ್ಕಾನ್ ತಾಜ್ 587 (97.8%), ನಾಫಿಯಾ ಕೌಸರ್ 583 (97.16%), ವಿಜ್ಞಾನ ವಿಭಾಗದಲ್ಲಿ ಧನುಷ್ – 583 (97.16%) ಅಂಕಗಳನ್ನು ಗಳಿಸಿದ್ದಾರೆ.