Home News ಸೊಣ್ಣೇನಹಳ್ಳಿಯ ಶ್ರೀರಾಮನ ಗುಡಿಯಲ್ಲಿ ಶ್ರೀರಾಮನ ಪಟ್ಟಾಭಿಷೇಕ ಕಾರ್ಯಕ್ರಮ

ಸೊಣ್ಣೇನಹಳ್ಳಿಯ ಶ್ರೀರಾಮನ ಗುಡಿಯಲ್ಲಿ ಶ್ರೀರಾಮನ ಪಟ್ಟಾಭಿಷೇಕ ಕಾರ್ಯಕ್ರಮ

0
Sonnenahalli Sri Rama Temple Pattabhisheka Programme

Sonnenahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸೊಣ್ಣೇನಹಳ್ಳಿ ಗ್ರಾಮದಲ್ಲಿ ಶ್ರೀರಾಮ ನವಮಿ ಅಂಗವಾಗಿ ಶ್ರೀರಾಮನ ಪಟ್ಟಾಭಿಷೇಕ ಉತ್ಸವವನ್ನು ದೇವಾಲಯದಲ್ಲಿ ಸೋಮವಾರ ಸಡಗರ ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು.

ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ, ವಿಶೇಷ ಪೂಜೆ ಮಾಡಿ ಮಹಾ ಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.

ಶ್ರೀರಾಮನವಮಿಯಂದು ಆರಂಭವಾದ ವಿಶೇಷ ಪೂಜೆಗಳು ಹತ್ತು ದಿನಗಳ ಕಾಲದಿಂದಲೂ ನಡೆಸಿಕೊಂಡು ಬಂದಿದ್ದು ಕಡೆಯ 10ನೇ ದಿನ ಸೋಮವಾರ ಶ್ರೀರಾಮನ ಪಟ್ಟಾಭಿಷೇಕ ನೆರವೇರಿಸಿ ಸಾಮೂಹಿಕ ಸಹ ಆರಾಧನೆ ಮತ್ತು ಸಹ ಭೋಜನ ನಡೆಯಿತು.

ಶ್ರೀರಾಮನವಮಿಯಿಂದ ಹತ್ತು ದಿನಗಳ ಕಾಲ ಜನ್ಮ, ಪಾನಕ ಪಟ್ಟಾಭಿಷೇಕ, ಕಲ್ಯಾಣೋತ್ಸವ, ತ್ರಿವಿಧೋತ್ಸವ, ರಥೋತ್ಸವ ಸೇರಿದಂತೆ ವಿವಿಧ ಪೂಜೆ ಕಾರ್ಯಗಳು ನಡೆಸಲಾಯಿತು.

ಗ್ರಾಮದ ಮುಖಂಡರಾದ ಮೂರ್ತಿ, ರಾಮಚಂದ್ರಪ್ಪ, ನಾಗೇಂದ್ರ, ಗೌತಮ್, ರಕ್ಷಿತ್, ಎಚ್.ಎನ್.ನಾಗರಾಜ್, ರಂಜಿತ್ ಕುಮಾರ್, ನಾರಾಯಣಸ್ವಾಮಿ, ವರಮ್ಮ, ನವೀನ್ ಕುಮಾರ್, ರಾಜೇಶ್, ಮುನಿರಾಜು, ಗಿರೀಶ್, ಕೀರ್ತಿ, ರಾಮಣ್ಣ, ನಾಗವೇಣಿ, ನರಸಿಂಹಯ್ಯ, ದೇವರಾಜ್ ಇನ್ನಿತರರು ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version