ಎಸ್ಸೆಸ್ಸೆಲ್ಸಿ ಪರೀಕ್ಷೆ ಕೊರೊನಾ ಕಾರಣದಿಂದ ನಡೆಯುತ್ತದೆಯೋ ಇಲ್ಲವೋ ಎಂಬ ಆತಂಕದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಇದ್ದರು. ಆದರೂ ಶಿಕ್ಷಣ ಇಲಾಖೆಯ ಸಾಂಘಿಕ ಪ್ರಯತ್ನದಿಂದ ಪರೀಕ್ಷೆಗಳು ಯಶಸ್ವಿಯಾಗಿ ನಡೆಯಿತಲ್ಲದೆ, ನಮ್ಮ ಜಿಲ್ಲೆ ಮೊದಲ ಸ್ಥಾನವನ್ನು ಪಡೆಯುವಂತಾಯಿತು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ತಿಳಿಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ತಾಲ್ಲೂಕಿಗೆ ಮೊದಲಿಗಲಾಗಿರುವ ಬಿಜಿಎಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಎಂ.ಎಸ್.ಮಹಿಮಾ (ಶೇ 99.2) ಅವರ ಮನೆಗೆ ಗುರುವಾರ ತೆರಳಿ ಅಭಿನಂದಿಸಿದ ಅವರು ಮಾತನಾಡಿದರು.
ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳು ಇತರರಿಗೆ ಪ್ರೇರಣೆಯಾಗಲಿ ಹಾಗೂ ಅವರನ್ನು ಬೆನ್ನು ತಟ್ಟಿ ಅಭಿನಂದಿಸುವ ಮೂಲಕ ಅವರು ಭವಿಷ್ಯದಲ್ಲಿ ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂಬುದು ಶಿಕ್ಷಣ ಇಲಾಖೆಯ ಆಶಯ. ಅದಕ್ಕಾಗಿ ಸಾಧಕ ವಿದ್ಯಾರ್ಥಿಯ ಮನೆಗೆ ತೆರಳಿ ವಿದ್ಯಾರ್ಥಿ, ಪೋಷಕರು ಹಾಗೂ ಶಿಕ್ಷಕರನ್ನು ಅಭಿನಂದಿಸುತ್ತಿರುವುದಾಗಿ ಹೇಳಿದರು.
ವಿದ್ಯಾರ್ಥಿನಿ ಎಂ.ಎಸ್.ಮಹಿಮಾ ಮಾತನಾಡಿ, ಅಂದಂದಿನ ಪಾಠಗಳನ್ನು ಅಂದಂದೇ ಓದಿಕೊಳ್ಳುತ್ತಿದ್ದೆ. ಕೊರೊನಾ ಲಾಕ್ ಡೌನ್ ಸಮಯದಲ್ಲಿ ಶಿಕ್ಷಕರು ವ್ಯಾಟ್ಸಪ್ ಗ್ರೂಪ್ ಮಾಡಿ ನಮ್ಮ ಓದಿಗೆ ನೆರವಾದರು. ಆನ್ ಲೈನ್ ಮೂಲಕ ಪರೀಕ್ಷೆಗಳನ್ನು ನಡೆಸಿದರು. ಮಾನಸಿಕವಾಗಿ ಕುಗ್ಗದಂತೆ ನೋಡಿಕೊಂಡರು. ಮುಂದೆ ಪಿಯುಸಿಯನ್ನು ಬಿಜಿಎಸ್ ಸಂಸ್ಥೆಯಲ್ಲೇ ಮುಂದುವರೆಸುವೆನು ಹಾಗೂ ವೈದ್ಯೆಯಾಗುವ ಕನಸಿದೆ ಎಂದು ನುಡಿದಳು.
ಬಿಜಿಎಸ್ ಶಾಲೆಯ ಪ್ರಾಂಶುಪಾಲ ಮಹದೇವಯ್ಯ, ಶಿಕ್ಷಕರಾದ ಪ್ರಸನ್ನಕುಮಾರ್, ಎಚ್.ವೈ.ನಾಗೇಶ್, ರವಿಕುಮಾರ್, ಮಂಜುನಾಥ್ ಹಾಗೂ ಪೋಷಕರಾದ ಕುಸುಮಾ, ಸತೀಶ್ ಬಾಬು ಹಾಜರಿದ್ದರು.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi