Home News ನಾಯಿ ಕಡಿತವಾದರೆ ಗಾಯವನ್ನು 15 ನಿಮಿಷ ತೊಳೆಯಿರಿ: ವಿಶ್ವ ರೇಬೀಸ್ ದಿನ ಜಾಗೃತಿ

ನಾಯಿ ಕಡಿತವಾದರೆ ಗಾಯವನ್ನು 15 ನಿಮಿಷ ತೊಳೆಯಿರಿ: ವಿಶ್ವ ರೇಬೀಸ್ ದಿನ ಜಾಗೃತಿ

0
World Rabies Day and youth mental health awareness programme at Government First Grade College, Sidlaghatta

Sidlaghatta : ಶಿಡ್ಲಘಟ್ಟ ಆರೋಗ್ಯ ಇಲಾಖೆ ಹಾಗೂ PATH ಸಂಸ್ಥೆಯ ಸಹಯೋಗದಲ್ಲಿ ವಿಶ್ವ ರೇಬೀಸ್ ದಿನಾಚರಣೆ ಮತ್ತು ಯುವಜನರಲ್ಲಿ ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಕಾರ್ಯಕ್ರಮವನ್ನು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆಯೋಜಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಗಳಾದ ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ದೇವರಾಜ್ ಹಾಗೂ ತಾಲೂಕು ಎಪಿಡೆಮಿಯಾಲಜಿಸ್ಟ್ ಅಪೇಕ್ಷ ಅವರು ನಾಯಿ ಕಡಿತದ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ನಾಯಿ ಕಡಿತವಾದರೆ ಏನು ಮಾಡಬೇಕು?

ನಾಯಿ ಕಡಿತವಾದ ತಕ್ಷಣ ಗಾಯವನ್ನು ಸೋಪು ಮತ್ತು ಹರಿಯುವ ನೀರಿನಿಂದ ಕನಿಷ್ಠ 15 ನಿಮಿಷ ತೊಳೆಯಬೇಕು. ಗಾಯಕ್ಕೆ ಅರಿಶಿನ, ಎಣ್ಣೆ ಸೇರಿದಂತೆ ಯಾವುದೇ ವಸ್ತುಗಳನ್ನು ಹಚ್ಚಬಾರದು. ತಕ್ಷಣವೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ ಪಡೆಯಬೇಕು. ಸರ್ಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುವ ಉಚಿತ ನಾಯಿ ಕಡಿತದ ಚಿಕಿತ್ಸಾ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ರೇಬೀಸ್ ಕಾಯಿಲೆ ತಡೆಗಟ್ಟಲು ಸಮಯಕ್ಕೆ ಸರಿಯಾಗಿ ಲಸಿಕೆ ಪಡೆಯುವುದು ಅತ್ಯಗತ್ಯ. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.

ಯುವಜನರ ಮಾನಸಿಕ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು?

ಯುವಜನರ ಮಾನಸಿಕ ಆರೋಗ್ಯದ ಕುರಿತು ಸಂಪನ್ಮೂಲ ವ್ಯಕ್ತಿ ಡಾ. ಸ್ವಪ್ನಿಲ್ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಒತ್ತಡ, ಆತಂಕ ಹಾಗೂ ಖಿನ್ನತೆಯಂತಹ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು. ಮಾನಸಿಕ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಮೂಲಕ ಸೂಕ್ತ ಆಪ್ತ ಸಮಾಲೋಚನೆ ಹಾಗೂ ವೈದ್ಯಕೀಯ ನೆರವು ಪಡೆಯಬೇಕು. ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮತ್ತು ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳುವುದು ಮುಖ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ವಿಜಯೇಂದ್ರ ಕುಮಾರ್, ಪ್ರಾಧ್ಯಾಪಕಿ ಜ್ಯೋತಿ, ಪ್ರಾಧ್ಯಾಪಕ ಮಂಜುನಾಥ್ ಹಾಗೂ PATH ಸಂಸ್ಥೆಯ ಸಂಯೋಜಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಹಿಂದಿನ ವರ್ಷಗಳ ರೇಬೀಸ್ ಜಾಗೃತಿ ಕುರಿತು ನಾಯಿಗಳಿಗೆ ಲಸಿಕೆಯನ್ನು ಕೊಡಿಸುವ ಮೂಲಕ Rabies ತಡೆಗಟ್ಟಿ ಹಾಗೂ ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮ ವರದಿಗಳನ್ನೂ ಓದಿ.

In English: The Health Department and PATH (a global health organisation) held a World Rabies Day and youth mental health awareness programme at the Government First Grade College in Sidlaghatta on Monday. Taluk health inspection officer Devaraj and taluk epidemiologist Apeksha told students that after a dog bite the wound should be washed with soap and running water for at least 15 minutes, nothing such as turmeric or oil should be applied, and the victim should go to the nearest government hospital immediately; free dog-bite treatment is available at government hospitals and primary health centres, and timely vaccination is essential to prevent rabies. Resource person Dr. Swapnil urged students not to ignore academic stress, anxiety or depression, and to share mental health problems openly and seek counselling and medical help.

FAQ

ನಾಯಿ ಕಡಿತವಾದರೆ ತಕ್ಷಣ ಏನು ಮಾಡಬೇಕು?
ಗಾಯವನ್ನು ಸೋಪು ಮತ್ತು ಹರಿಯುವ ನೀರಿನಿಂದ ಕನಿಷ್ಠ 15 ನಿಮಿಷ ತೊಳೆಯಬೇಕು. ಅರಿಶಿನ, ಎಣ್ಣೆ ಸೇರಿದಂತೆ ಯಾವುದೇ ವಸ್ತು ಹಚ್ಚಬಾರದು. ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ ಪಡೆಯಬೇಕು.

ನಾಯಿ ಕಡಿತಕ್ಕೆ ಉಚಿತ ಚಿಕಿತ್ಸೆ ಎಲ್ಲಿ ಸಿಗುತ್ತದೆ?
ಸರ್ಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಾಯಿ ಕಡಿತಕ್ಕೆ ಉಚಿತ ಚಿಕಿತ್ಸೆ ಲಭ್ಯವಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

For Daily Updates WhatsApp ‘HI’ to 7406303366

error: Content is protected !!
Exit mobile version