ಪೂರ್ಣ ಪುಟ · Open full page
News

ಆಗಸ್ಟ್ ಆರಂಭದ ಮಳೆಗೆ ಹರ್ಷಗೊಂಡ ರೈತರು: ರಾಗಿ, ಜೋಳ, ಅವರೆ ಬಿತ್ತನೆ ಚುರುಕು

Sidlaghatta Taluk Farmers Sowing Ragi Jowar After August Rain

Sidlaghatta ಶಿಡ್ಲಘಟ್ಟ : ಜೂನ್, ಜುಲೈ ತಿಂಗಳುಗಳಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿದ್ದ ತಾಲ್ಲೂಕಿನ ರೈತರಿಗೆ, ಆಗಸ್ಟ್ ಆರಂಭದಲ್ಲಿ ಸುರಿದ ಮಳೆ ನೆಮ್ಮದಿ ತಂದಿದೆ. ಆ. 3 ಮತ್ತು 5ರಂದು ತಾಲ್ಲೂಕಿನ ಹಲವೆಡೆ ಮಳೆಯಾಗಿದ್ದು, ಈಗಾಗಲೇ ಉಳುಮೆ ಮಾಡಿಕೊಂಡಿದ್ದ ರೈತರು ಬಿತ್ತನೆ ಕಾರ್ಯವನ್ನು ಚುರುಕುಗೊಳಿಸಿದ್ದಾರೆ.

ಮಳೆ ಕೊರತೆಯಿಂದ ಜಮೀನುಗಳಲ್ಲಿ ತೇವಾಂಶ ಕುಸಿದಿದ್ದ ಕಾರಣ, ಮಳೆಯಾಶ್ರಿತ ಕೃಷಿ ಅವಲಂಬಿಸಿರುವ ರೈತರು ಬಿತ್ತನೆಗೆ ಸೂಕ್ತ ಸಮಯಕ್ಕಾಗಿ ಕಾದಿದ್ದರು. ಬಿತ್ತನೆಯ ಬಳಿಕ ಮಳೆ ಕೈಕೊಟ್ಟರೆ ಬೆಳೆ ಹಾನಿಯಾಗಬಹುದೆಂಬ ಆತಂಕದಿಂದ ಹಲವರು ಬಿತ್ತನೆ ಮುಂದೂಡಿದ್ದರು. ಇದೀಗ ತೇವಾಂಶ ಹೆಚ್ಚಿದ ಹಿನ್ನೆಲೆಯಲ್ಲಿ ರಾಗಿ, ಜೋಳ, ಅವರೆ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆಯಲ್ಲಿ ರೈತರು ತೊಡಗಿದ್ದು, ಹೊಲಗಳಲ್ಲಿ ಕೃಷಿ ಕಾರ್ಮಿಕರು ಹಾಗೂ ಟ್ರ್ಯಾಕ್ಟರ್‌ ಗಳ ಚಟುವಟಿಕೆ ಗರಿಗೆದರಿದೆ.

ಆದರೆ, ಈ ಮಳೆ ರೈತರ ಆತಂಕವನ್ನು ಸಂಪೂರ್ಣ ದೂರ ಮಾಡಿಲ್ಲ. ಮುಂದಿನ ದಿನಗಳಲ್ಲಿ ಮಳೆ ಮುಂದುವರಿದರೆ ಮೊಳಕೆಯೊಡೆತ ಮತ್ತು ಬೆಳೆ ಬೆಳವಣಿಗೆಗೆ ಪೂರಕವಾಗಲಿದ್ದು, ಮತ್ತೆ ಮಳೆ ಕೈಕೊಟ್ಟಲ್ಲಿ ಬಿತ್ತಿದ ಬೀಜಗಳಿಗೆ ತೇವಾಂಶದ ಕೊರತೆಯಾಗಿ ಬೆಳೆಗೆ ಹಿನ್ನಡೆಯಾಗುವ ಸಾಧ್ಯತೆಯೂ ಇದೆ. ಹೀಗಾಗಿ ಮುಂದಿನ ಕೆಲವು ದಿನಗಳ ಹವಾಮಾನ ಸ್ಥಿತಿ ರೈತರ ಪಾಲಿಗೆ ನಿರ್ಣಾಯಕವಾಗಿದ್ದು, ವರುಣನ ಕೃಪೆ ಮುಂದುವರಿಯಲಿ ಎಂಬ ನಿರೀಕ್ಷೆಯಲ್ಲಿ ರೈತರು ಆಕಾಶದತ್ತ ಮುಖಮಾಡಿದ್ದಾರೆ.

🔔 ಹೊಸ ಸುದ್ದಿ ಫೋನ್‌ನಲ್ಲಿ ಬೇಕಾ?

ನ್ಯೂಸ್ ಬಂದ ತಕ್ಷಣ alert ಬರುತ್ತದೆ

Free ✔ ಯಾವಾಗ ಬೇಕಾದರೂ off
By turning on you agree to the Terms and Privacy Notice.

📈 ಇಂದಿನ silk rateCB ₹787 · BV ₹943 per kg🔥 ಹೆಚ್ಚು ಓದಿದ್ದುಹುಟ್ಟಿದ 8ನೇ ದಿನಕ್ಕೇ ಆಧಾರ್, 12ನೇ ದಿನಕ್ಕೆ ರೇಷನ್ ಕಾರ್ಡ್: ಹಸುಗೂಸಿಗೆ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ

⚠️ Report an error in this story

📰 ಇದನ್ನೂ ಓದಿ

📸 ನಿಮ್ಮ ಊರಿನ ಸುದ್ದಿ ಇದೆಯೇ?

ಫೋಟೋ ಸಮೇತ ಕಳುಹಿಸಿ

💬 Send news📢 Daily updates: join our WhatsApp channel
Exit mobile version