Home News ‘ಗಾನಾಂಜಲಿ ಕಾರ್ಯಕ್ರಮ’ ಹಾಗೂ ‘ನಾಟ್ಯಾಂಜಲಿ ಕಾರ್ಯಕ್ರಮ’

‘ಗಾನಾಂಜಲಿ ಕಾರ್ಯಕ್ರಮ’ ಹಾಗೂ ‘ನಾಟ್ಯಾಂಜಲಿ ಕಾರ್ಯಕ್ರಮ’

0

ಸಂಗೀತ ನಾಟ್ಯ ಸಂಸ್ಕೃತಿಗಳ ಅನುಭಾವ ಇಡೀ ವಿಶ್ವ ಜನಾಂಗವನ್ನು ಅನಾದಿಕಾಲದಿಂದಲೂ ಆವರಿಸುತ್ತ ಬಂದಿದೆ. ಈ ಸಂಗೀತವನ್ನು ಸಮಾಜಕ್ಕೆ ದಯಪಾಲಿಸಿದ ನಮ್ಮ ಅನಾದಿ ಪರಂಪರೆಗೆ, ಇಂದಿಗೂ ಸಂಗೀತವನ್ನು ಭಕ್ತಿ ಶ್ರದ್ಧೆಗಳಿಂದ ಕಲಿತು ಎಲ್ಲೆಲ್ಲೂ ಗಾನ ಗಂಗೆಯನ್ನು ಹರಿಸುತ್ತಿರುವ ಆಚಾರ್ಯ ಪರಂಪರೆಗೆ, ಕಲಾವಿದ ಪರಂಪರೆ ಮತ್ತು ಕಲಾರಸಿಕ ಪರಂಪರೆಗಳಿಗೆ ನಾವು ಕೃತಜ್ಞರಾಗಿರೋಣ ಎಂದು ಮದ್ರಾಸಿನ ಆಕಾಶವಾಣಿ ನಿರೂಪಕರು ಹಾಗೂ ಶ್ರೀ ತ್ಯಾಗರಾಜ ಬ್ರಹ್ಮ ಮಹೋತ್ಸವ ಸೇವಾ ಸಭಾ ಆರಾಧನ ಸಂಗೀತೋತ್ಸವ ಸಮಿತಿ ಸಲಹಾ ಸಮಿತಿ ಸದಸ್ಯ ಟಿ.ಎಂ.ಎಸ್‌.ಮಣಿ ತಿಳಿಸಿದರು.
ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಶ್ರೀ ಮಯೂರಿ ನಾಟ್ಯಕಲಾ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ‘ಗಾನಾಂಜಲಿ ಕಾರ್ಯಕ್ರಮ’ ಹಾಗೂ ‘ನಾಟ್ಯಾಂಜಲಿ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಡ್ಲಘಟ್ಟದ ವಾಸವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಶ್ರೀ ಮಯೂರಿ ನಾಟ್ಯಕಲಾ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ‘ಗಾನಾಂಜಲಿ ಕಾರ್ಯಕ್ರಮ’ದಲ್ಲಿ ಮಕ್ಕಳು ಹಾಡಿದರು.

ಒಂದು ಕಾಲದಲ್ಲಿ ದೇಗುಲಗಳೇ ಸಂಗೀತ ಸಂಸ್ಕೃತಿಗಳನ್ನು ಪಸರಿಸುವ ಕೇಂದ್ರಗಳಾಗಿದ್ದವು. ಇಂದಿನ ಒತ್ತಡದ ಪ್ರಾಪಂಚಿಕ ಬದುಕಿನಲ್ಲಿ ಸಂಗೀತವೆಂಬುದೊಂದೇ ನಮಗೆ ಸುಲಭವಾಗಿ ದಕ್ಕುವ ವಿಶ್ರಾಂತ ತಾಣ. ಇವೆಲ್ಲದರ ಜೊತೆಗೆ ನಮ್ಮ ಪ್ರಕೃತಿಯಲ್ಲಿ ಹಾಸುಹೊಕ್ಕಾಗಿರುವ ಸಂಗೀತ ನಮ್ಮ ಬದುಕಿನಿಂದ ಕಳೆದುಹೋಗದಂತೆ ಎಚ್ಚರವಹಿಸಿ ನಮ್ಮ ಮತ್ತು ಮುಂದಿನ ತಲೆಮಾರುಗಳ ಬದುಕು ಸಂಗೀತವೆಂಬ ಶ್ರೇಷ್ಠತೆಯನ್ನು ಎಂದೆಂದೂ ಅನುಭಾವಿಸುವ ಅವಕಾಶವನ್ನು ಜೀವಂತವಾಗಿರಿಸಲು ಪ್ರಯತ್ನವನ್ನು ಸಹಾ ಈ ಆಚರಣೆ ಪ್ರೇರೇಪಿಸುವಂತದ್ದಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾ ರಘು ಮಾತನಾಡಿ, ನೃತ್ಯ ಹಾಗೂ ಸಂಗೀತದಂತಹ ಕಲಾ ಕ್ಷೇತ್ರಗಳಿಂದ ಗುರು ಶಿಷ್ಯ ಪರಂಪರೆಯ ಪಾವಿತ್ರ್ಯತೆ ಇನ್ನೂ ಉಳಿದಿದೆ. ಮಕ್ಕಳಿಗೆ ಎಳೆಯ ವಯಸ್ಸಿನಿಂದಲೇ ವಿವಿಧ ಕಲೆಗಳನ್ನು ಕಲಿಯಲು ಪ್ರೋತ್ಸಾಹಿಸಬೇಕು. ಇದರಿಂದ ಕನಿಷ್ಠ ಕಲೆಯನ್ನು ಆಸ್ವಾದಿಸುವ ಮನಸ್ಥಿತಿ ಅವರಲ್ಲಿ ರೂಢಿಸಿದಂತಾಗುತ್ತದೆ ಎಂದು ನುಡಿದರು.
ಬೆಳಿಗ್ಗೆಯಿಂದ ನಡೆದ ಗಾನಾಂಜಲಿ ಸಂಗೀತ ಕಾರ್ಯಕ್ರಮದಲ್ಲಿ ಸಿಂಧು, ಶ್ವೇತ, ಹರಿಣಿ, ನಿಸರ್ಗ, ಪಲ್ಲವಿ, ಮಾನಸ, ಪ್ರಿಯ, ಮಿಲನ, ನಿತ್ಯ, ಯಶಿತ, ಝಾನ್ಸಿ, ಕುಸುಮ, ಶ್ರಾವಣಿ, ಲಕ್ಷ್ಮೀಪ್ರಿಯ, ಅಮೃತ, ಗುಣ, ಮಹಾಲಕ್ಷ್ಮಿ, ಮಾಲತಿ, ನಾಗಮಣಿ, ಬಾಲಕೃಷ್ಣ ಭಾಗವತರ್‌, ವಿದುಷಿ ಎಸ್‌.ವಿ.ಭಾಗ್ಯಲಕ್ಷ್ಮಿ ಅಯ್ಯರ್‌, ವಿದುಷಿ ಮಂಜುಳಾ ಜಗದೀಶ್‌, ರೇಖ, ಟಿ.ಎಂ.ಎಸ್‌.ಮಣಿ, ಸುನಂದಮ್ಮ, ಪಂಕಜಮ್ಮ, ಸರೋಜಮ್ಮ, ಪದ್ಮ, ದೇವೀರಮ್ಮ, ಶಶಿಕಲಾ, ವಿದ್ವಾನ್‌ ಚಿಂತಲಪಲ್ಲಿ ಸೋಮಶೇಖರ್‌ ಸಂಗೀತವನ್ನು ನಡೆಸಿಕೊಟ್ಟರೆ, ಸಂಜೆ ನಾಟ್ಯಾಂಜಲಿ ಭರತನಾಟ್ಯ ಕಾರ್ಯಕ್ರಮದಲ್ಲಿ ಪರಿಣಿತ, ಲಹರಿ, ಸಿಂಧು, ನಿಸರ್ಗ, ನಿಹಾರಿಕ, ಹರಿಣಿ, ಶ್ವೇತ, ಭುವನ, ಶೋಭಿತ ಮುಂತಾದವರಿಂದ ನೃತ್ಯ ಪ್ರದರ್ಶನ ನಡೆಯಿತು.
ಶ್ರೀ ಮಯೂರಿ ನಾಟ್ಯಕಲಾ ಕೇಂದ್ರದ ಅಧ್ಯಕ್ಷ ಎಸ್‌.ವಿ.ಅಯ್ಯರ್‌, ಕಾರ್ಯದರ್ಶಿ ಎಸ್‌.ವಿ.ಭಾಗ್ಯಲಕ್ಷ್ಮಿ ಅಯ್ಯರ್‌,

error: Content is protected !!