Home News ರಾಯಲ್ ಪಬ್ಲಿಕ್ ಶಾಲೆಯ ೪ನೇ ವಾರ್ಷಿಕೋತ್ಸವ

ರಾಯಲ್ ಪಬ್ಲಿಕ್ ಶಾಲೆಯ ೪ನೇ ವಾರ್ಷಿಕೋತ್ಸವ

0

ನಗರ ಹೊರವಲಯದ ಬೂದಾಳ ಗೇಟ್‌ನಲ್ಲಿರುವ ರಾಯಲ್ ಪಬ್ಲಿಕ್ ಶಾಲೆಯ ೪ನೇ ವಾರ್ಷಿಕೋತ್ಸವ ಕಾರ್ಯಕ್ರಮ ಡಿಸೆಂಬರ್೨೬ರ ಸೋಮವಾರದಂದು ಶಾಲಾ ಆವರಣದಲ್ಲಿ ನಡೆಯಲಿದೆ.
ಸಂಜೆ ೪ ಗಂಟೆಯಿಂದ ೧೦ ಗಂಟೆಯವರೆಗೂ ಕಾರ್ಯಕ್ರಮ ನಡೆಯಲಿದ್ದು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎಂ.ಎಸ್.ಮಹೇಶ್ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದು, ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ಬಿಇಒ ಎಸ್.ರಘುನಾಥರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಎಸ್.ವಿ.ನಾಗರಾಜ್‌ರಾವ್, ಶ್ರೀನಿವಾಸಪುರ ತಾಲೂಕು ಬಿಇಒ ಟಿ.ಕೆ.ರಾಘವೇಂದ್ರ, ವಿನಯ್ ವಿದ್ಯಾಸಂಸ್ಥೆಯ ಅಧ್ಯಕ್ಷೆ ಕೆ.ಮಂಜುಳ ಇನ್ನಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

error: Content is protected !!