Home News ಉಚಿತ AYUSH ಆರೋಗ್ಯ ತಪಾಸಣಾ ಶಿಬಿರ: ಮುಂಚಿತ ಪ್ರಚಾರ ಇಲ್ಲದ್ದಕ್ಕೆ ಅಸಮಾಧಾನ

ಉಚಿತ AYUSH ಆರೋಗ್ಯ ತಪಾಸಣಾ ಶಿಬಿರ: ಮುಂಚಿತ ಪ್ರಚಾರ ಇಲ್ಲದ್ದಕ್ಕೆ ಅಸಮಾಧಾನ

0
AYUSH free health check-up camp at Sidlaghatta taluk office with medicines distributed

Sidlaghatta : ಶಿಡ್ಲಘಟ್ಟ ತಾಲ್ಲೂಕು ಕಚೇರಿ ಆವರಣದಲ್ಲಿ AYUSH ಇಲಾಖೆಯ ವತಿಯಿಂದ ಶುಕ್ರವಾರ ರಾಷ್ಟ್ರೀಯ AYUSH ಅಭಿಯಾನದಡಿ ಜಿಲ್ಲಾ ಮಟ್ಟದ ಉಚಿತ ವಿಶೇಷ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಶಿಬಿರದಲ್ಲಿ ಸಾರ್ವಜನಿಕರಿಗೆ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಿ, AYUSH ಪದ್ಧತಿಗಳ ಮೂಲಕ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ವೈದ್ಯರು ಸಲಹೆ ನೀಡಿ, ಉಚಿತವಾಗಿ ಔಷಧಿಗಳನ್ನು ನೀಡಿದರು.

ಶಿಬಿರದ ಪ್ರಚಾರದ ಬಗ್ಗೆ ಯಾವ ಆಕ್ಷೇಪ?

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದಗೌಡ ಮಾತನಾಡಿ, “ಸರ್ಕಾರ ಬಡವರು ಹಾಗೂ ಗ್ರಾಮೀಣ ಜನರ ಅನುಕೂಲಕ್ಕಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುತ್ತಿದೆ. ಆದರೆ, ಶಿಬಿರದ ಕುರಿತು ತಾಲ್ಲೂಕಿನ ಜನರಿಗೆ ಮುಂಚಿತವಾಗಿ ಸೂಕ್ತ ಮಾಹಿತಿ ಹಾಗೂ ಜಾಗೃತಿ ಮೂಡಿಸದಿರುವುದು ಬೇಸರದ ಸಂಗತಿ” ಎಂದರು.

“ತಾಲ್ಲೂಕು ಕಚೇರಿಗೆ ತಮ್ಮ ವಿವಿಧ ಕೆಲಸಗಳಿಗಾಗಿ ಬಂದಿದ್ದ ಕೆಲವರು ಶಿಬಿರದ ಬಗ್ಗೆ ತಿಳಿದು ಅನಿರೀಕ್ಷಿತವಾಗಿ ಭಾಗವಹಿಸುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳ ಉದ್ದೇಶ ಹೆಚ್ಚಿನ ಜನರಿಗೆ ತಲುಪಬೇಕಾದರೆ, ಗ್ರಾಮ ಮಟ್ಟದಲ್ಲಿ ಮುಂಚಿತವಾಗಿ ಪ್ರಚಾರ ನಡೆಸಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು” ಎಂದು ಅವರು ಆಗ್ರಹಿಸಿದರು.

ಸರ್ಕಾರ ಬಡವರು ಮತ್ತು ಆರ್ಥಿಕವಾಗಿ ಹಿಂದುಳಿದವರಿಗಾಗಿ ಆಯೋಜಿಸುವ ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಶಿಬಿರದಲ್ಲಿ ವೈದ್ಯರಾದ ಡಾ. ವಿಜಯ್ ಕುಮಾರ್, ಡಾ. ದಿವ್ಯಲಕ್ಷ್ಮಿ, ಡಾ. ಸುಂದರ್ ರಾಜ್ ಹಾಗೂ ಡಾ. ಅನಿಲ್ ಕುಮಾರ್ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಇತ್ತೀಚಿನ ಆರೋಗ್ಯ ಶಿಬಿರಗಳ ಕುರಿತು ಬೆಳವಣಿಗೆ ವಿಳಂಬ ಹೊಂದಿರುವ ಮಕ್ಕಳಿಗೆ ಬೆಂಗಳೂರು ತಜ್ಞರಿಂದ ಉಚಿತ ತಪಾಸಣಾ ಶಿಬಿರ ಹಾಗೂ ಮಧುಮೇಹ ನಿಯಂತ್ರಣ ಕುರಿತು ಅಮೆರಿಕದ ವಿಜ್ಞಾನಿಗಳ ಅಧ್ಯಯನ: ಗೌರಮ್ಮ ಮಲ್ಲೇಶೆಟ್ಟಿ ಆರೋಗ್ಯ ಕೇಂದ್ರಕ್ಕೆ ಭೇಟಿ ವರದಿಗಳನ್ನೂ ಓದಿ.

In English: A district-level free special health check-up camp was held by the AYUSH (Ayurveda, Yoga & Naturopathy, Unani, Siddha and Homoeopathy) department under the National AYUSH Mission at the Sidlaghatta taluk office premises on Friday. Doctors conducted various check-ups, advised people on staying healthy through AYUSH systems and distributed medicines free of cost. BJP rural mandal president Seekal Anandagowda said that while the government organises such camps for the poor and rural people, it was disappointing that people in the taluk were not informed in advance, noting that some who had come to the taluk office for other work joined only by chance; he urged officials to publicise such camps at the village level beforehand. Doctors Vijay Kumar, Divyalakshmi, Sundar Raj and Anil Kumar and health department staff were present.

For Daily Updates WhatsApp ‘HI’ to 7406303366

error: Content is protected !!
Exit mobile version