Home News BJPಯಿಂದ ಪ್ರಣಾಳಿಕೆ ಸಲಹಾ ಸಂಗ್ರಹ ಅಭಿಯಾನ

BJPಯಿಂದ ಪ್ರಣಾಳಿಕೆ ಸಲಹಾ ಸಂಗ್ರಹ ಅಭಿಯಾನ

BJP to Prepare Election Manifesto Based on Public Opinion

0
Bharatiya Janata Party (BJP) announces plan to prepare election manifesto based on public opinion and criticizes Congress party's promises.

Sidlaghatta : ರಾಜಕೀಯ ಪಕ್ಷಗಳು ಚುನಾವಣೆ ವೇಳೆ ಮತದಾರರಿಗೆ ನೀಡುವ ಭರವಸೆಯ ಪ್ರಣಾಳಿಕೆಯನ್ನು ಎಲ್ಲೋ ಸ್ಟಾರ್ ಹೋಟೆಲ್‌ಗಳಲ್ಲಿ ಕುಳಿತು ತಯಾರಿಸುವ ಪರಿಪಾಠ ನಮ್ಮ ಬಿಜೆಪಿ ಪಕ್ಷಕ್ಕಿಲ್ಲ. ಜನ ಸಾಮಾನ್ಯರಿಂದ ಅಭಿಪ್ರಾಯ ಸಂಗ್ರಹಿಸಿ ಅದರ ಆಧಾರದಲ್ಲಿ ಪ್ರಣಾಳಿಕೆಯನ್ನು ತಯಾರಿಸಲಾಗುತ್ತದೆ ಎಂದು ಪ್ರಣಾಳಿಕೆ ಅಭಿಪ್ರಾಯ ಸಂಗ್ರಹ ಸಮಿತಿಯ ರಾಜ್ಯ ಸಂಚಾಲಕ ವಿಶ್ವನಾಥ್ ಭಟ್ ತಿಳಿಸಿದರು.

ಶಿಡ್ಲಘಟ್ಟ ನಗರದ ಮಯೂರ ವೃತ್ತದಲ್ಲಿನ ಸೀಕಲ್ ರಾಮಚಂದ್ರೇಗೌಡರ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಣಾಳಿಕೆ ಸಲಹಾ ಸಂಗ್ರಹ ಅಭಿಯಾನ ಸಭೆಯಲ್ಲಿ ಅವರು ಮಾತನಾಡಿದರು.

ನಮ್ಮ ಬಿಜೆಪಿ ಪಾಲಿಗೆ ಪ್ರಣಾಳಿಕೆಯು ಭಗವದ್ಗೀತೆ ಇದ್ದಂತೆ, ಹಾಗಾಗಿ ರಾಜ್ಯದ ಉದ್ದಗಲಕ್ಕೂ ಜನ ಸಾಮಾನ್ಯರು ಸೇರಿ ನಾನಾ ವರ್ಗದ ಜನರ ಸಭೆಗಳನ್ನು ನಡೆಸಿ ಅವರಿಂದ ಅಭಿಪ್ರಾಯ ಸಂಗ್ರಹಿಸಿ ಅದನ್ನು ಜಿಲ್ಲೆ, ರಾಜ್ಯ ಹಾಗೂ ಕೇಂದ್ರ ಸಮಿತಿಗೆ ರವಾನಿಸಲಾಗುತ್ತದೆ.

ಎಲ್ಲವನ್ನೂ ಸಂಗ್ರಹಿಸಿ ಆಧ್ಯತೆ ಮೇರೆಗೆ ಮುಖ್ಯ ಅಂಶಗಳನ್ನು ಸಂಗ್ರಹಿಸಿ ಅವುಗಳನ್ನು ಪ್ರಣಾಳಿಕೆಯಲ್ಲಿ ಅಳವಡಿಸಿಕೊಂಡು ಮುಂದೆ ನಮ್ಮದೇ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದ್ದು, ಆಗ ಆಧ್ಯತೆ ಮೇರೆಗೆ ಪ್ರಣಾಳಿಕೆಯ ಅಂಶಗಳನ್ನು ಹಂತ ಹಂತವಾಗಿ ಅನುಷ್ಠಾನ ಮಾಡಲಾಗುವುದು ಎಂದು ಹೇಳಿದರು.

ಈ ಹಿಂದೆ ದೇಶ ಕಂಡಂತಹ ಅತಿ ದೊಡ್ಡ ಭರವಸೆ ಎಂದರೆ ಗರೀಭಿ ಹಠಾವೋ, ಇಂರಾಗಾಂಧಿ ಅವರ ಈ ಘೋಷಣೆಯಿಂದ 70ರ ದಶಕದಲ್ಲಿನ ಶೇ 74ರಷ್ಟಿದ್ದ ಬಡವರು ಅಂದು ಇಂರಾಗಾಂಧಿಯನ್ನು ಬೆಂಬಲಿಸಿದ್ದರು.

ಆದರೆ ಬಡವರು ಬಡವರಾಗಿಯೆ ಉಳಿದರು ಬಡತನ ತೊಲಗಲಿಲ್ಲ ಬದಲಿಗೆ ಬಡವರು ತೊಲಗಿದರು ಎಂದು ವ್ಯಂಗ್ಯವಾಡಿದ ಅವರು, ಇಂದಿಗೂ ಕಾಂಗ್ರೆಸ್‌ನ ದೊಡ್ಡ ಭರವಸೆಯಾಗಿಯೆ ಅದು ಉಳಿದುಕೊಂಡಿದೆ ಎಂದು ಹೇಳಿದರು.

ಉಚಿತ ಕೊಡುಗೆಗಳು ದೇಶ ಹಾಗೂ ರಾಜ್ಯದ ಆರ್ಥಿಕ ಭವಿಷ್ಯದಿಂದ ಒಳ್ಳೆಯದಲ್ಲ ಎಂದ ಅವರು, ಕಾಂಗ್ರೆಸ್ ನೀಡುತ್ತಿರುವ ಗ್ಯಾರಂಟಿಯಂತೆ ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್, ಮನೆಯ ಒಡತಿಗೆ ಪ್ರತಿ ತಿಂಗಳು ತಲಾ 2 ಸಾವಿರ ರೂ, ಹಾಗೂ ಪ್ರತಿ ಮನೆಗೂ ಕೆಜಿ ಅಕ್ಕಿ ಕೊಡುವುದಾಗಿ ಘೋಷಿಸಿದ್ದಾರೆ.

ಇದರಿಂದ ರಾಜ್ಯದ ಬೊಕ್ಕಸಕ್ಕೆ ಪ್ರತಿ ವರ್ಷ 75 ಸಾವಿರ ಕೋಟಿ ರೂ.ವೆಚ್ಚವಾಗಲಿದ್ದು ಇಷ್ಟು ಹಣವನ್ನು ಹೊಂದಿಸುವುದು ಕಷ್ಟ ಜತೆಗೆ ಶ್ರೀಲಂಕಾ ಸ್ಥಿತಿಗೆ ನಾವು ಹೋಗುವುದರಲ್ಲಿ ಅನುಮಾನವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ, ನಗರಘಟಕದ ಅಧ್ಯಕ್ಷ ರಘು, ಡಾ.ಸತ್ಯನಾರಾಯಣರಾವ್, ಬಿ.ವಿ.ಕೃಷ್ಣಪ್ಪ, ಮುಖಂಡರಾದ ಸುರೇಶ್, ಆನಂದಗೌಡ, ಸ್ಕೂಲ್ ದೇವರಾಜ್, ಮಧುಚಂದ್ರ ಮುನಿರಾಜು, ಮಂಜುಳಮ್ಮ ಹಾಜರಿದ್ದರು.


BJP to Prepare Election Manifesto Based on Public Opinion

Sidlaghatta : The Bharatiya Janata Party (BJP) has announced that it will prepare its election manifesto based on the opinions of the general public. State Coordinator of the Manifesto Opinion Collection Committee, Vishwanath Bhatt, stated that the party does not have the practice of preparing manifestos in star hotels, but rather sees it as a sacred document akin to the Bhagavad Gita.

In order to collect opinions, meetings are being held throughout the state to gather the views of the common people. These opinions will then be forwarded to district, state, and central committees, where they will be adopted and implemented step by step if the party is voted back into power.

Bhatt took a swipe at the Congress party’s past promises, noting that although their “Garibhi Hathao” (Remove Poverty) campaign in the 1970s had garnered significant support, poverty persisted and the poor did not see the promised relief.

He also criticized the Congress party’s latest electoral promise of providing 200 units of free electricity to every household, stating that such freebies are not sustainable and will have a negative impact on the economic future of the state and the country.

Several BJP leaders, including rural mandal president Kambadahalli Surendra Gowda, city unit president Raghu, and others, were present at the manifesto advisory collection campaign meeting held at Seikal Ramachandre Gowda’s office hall in Mayura Circle.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version