ಪೂರ್ಣ ಪುಟ · Open full page

ಸ್ಮಶಾನದಲ್ಲಿ ಮೂಲಸೌಕರ್ಯ ಇಲ್ಲ: ರಸ್ತೆ, ನೀರು, ಬೇಲಿಗೆ ಸೆಪ್ಟೆಂಬರ್ ಮನವಿ ಸಲ್ಲಿಸಿದರೂ ಸಿಗದ ಸ್ಪಂದನೆ

Overgrown public cemetery land with a narrow footpath, a wire fence and an elderly man standing among shrubs

Sidlaghatta : ಜಂಗಮಕೋಟೆ ಗ್ರಾಮದ ಸರ್ವೆ ನಂ. 01ರಲ್ಲಿರುವ ಸಾರ್ವಜನಿಕ ಸ್ಮಶಾನದಲ್ಲಿ ಮೂಲಸೌಕರ್ಯ ಕಲ್ಪಿಸುವಂತೆ ಮನವಿ ಸಲ್ಲಿಸಿ ಹಲವು ದಿನಗಳಾದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಸೆಪ್ಟೆಂಬರ್ 26ರಂದು ಜಂಗಮಕೋಟೆಯಲ್ಲಿ ನಡೆದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಪದ್ಮಶಾಲಿ ಸೇವಾಭಿವೃದ್ಧಿ ಟ್ರಸ್ಟ್ (ರಿ.) ವತಿಯಿಂದ ತಹಶೀಲ್ದಾರ್ ಮತ್ತು ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಅದರ ನಂತರವೂ ಸಮಸ್ಯೆ ಬಗೆಹರಿದಿಲ್ಲ ಎಂದು ಟ್ರಸ್ಟ್ ಅಧ್ಯಕ್ಷ ವಿ.ಎನ್. ಗೋಪಾಲಕೃಷ್ಣಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿವಿಧ ಸಮುದಾಯಗಳ ಜನರು ಅಂತ್ಯಕ್ರಿಯೆಗೆ ಈ ಸ್ಮಶಾನವನ್ನು ಬಳಸುತ್ತಿದ್ದಾರೆ. ಆದರೆ ಗಿಡಗಂಟಿ ಬೆಳೆದು ಸ್ವಚ್ಛತೆ ಇಲ್ಲವಾಗಿದೆ, ಅಂತ್ಯಕ್ರಿಯೆಗೆ ಹೋಗಲು ಸೂಕ್ತ ರಸ್ತೆಯೂ ಇಲ್ಲ. ಜಾಗದ ಒತ್ತುವರಿ ತೆರವುಗೊಳಿಸಿ ಹದ್ದುಬಸ್ತು ಮಾಡಬೇಕಿದೆ; ನೀರಿನ ವ್ಯವಸ್ಥೆ ಕಲ್ಪಿಸಿ ಸುತ್ತಲೂ ತಂತಿಬೇಲಿ ನಿರ್ಮಿಸುವ ಅಗತ್ಯವೂ ಇದೆ ಎಂದು ಟ್ರಸ್ಟ್ ತಿಳಿಸಿದೆ.

ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಒತ್ತುವರಿ ತೆರವುಗೊಳಿಸುವುದರ ಜತೆಗೆ ರಸ್ತೆ, ನೀರು, ಸ್ವಚ್ಛತೆ ಮತ್ತು ತಂತಿಬೇಲಿ ಒದಗಿಸಬೇಕು ಎಂದು ಗೋಪಾಲಕೃಷ್ಣಯ್ಯ ಒತ್ತಾಯಿಸಿದ್ದಾರೆ. ಕನಿಷ್ಠ ಸೌಲಭ್ಯಗಳೂ ಇಲ್ಲದಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಕುರಿತು ಅಧಿಕಾರಿಗಳ ಪ್ರತಿಕ್ರಿಯೆ ಈ ವರದಿ ಸಿದ್ಧಪಡಿಸುವ ವೇಳೆಗೆ ಲಭ್ಯವಾಗಿಲ್ಲ.

ಸಂಬಂಧಿತ ಸುದ್ದಿ: ಸ್ಮಶಾನ ಜಾಗ ಒತ್ತುವರಿ ವಿವಾದ: ತಹಶೀಲ್ದಾರ್ ಸ್ಥಳ ಪರಿಶೀಲನೆ, ದಾಖಲೆ ಸಲ್ಲಿಸಲು ಸೂಚನೆ | ಪ್ರಜಾಸೇವಾ ಆಂದೋಲನದಲ್ಲಿ 600ಕ್ಕೂ ಹೆಚ್ಚು ಅರ್ಜಿ: KIADBಗೆ ಜಮೀನು ನೀಡಲು ಒಪ್ಪದ ಸುಮಾರು 200 ರೈತರು | ಭೂಮಿ, ಸ್ಮಶಾನ, ನಿವೇಶನ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ತಹಶೀಲ್ದಾರ್‌ಗೆ ಮನವಿ

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

Nearby

ಇದನ್ನೂ ಓದಿ

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Exit mobile version