
Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಚೀಮನಹಳ್ಳಿ ಗ್ರಾಮದ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ದಾರ ಹಾಗೂ ನೂತನ ಶಿಲಾವಿಗ್ರಹ ಪ್ರತಿಷ್ಠಾಪನಾ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ಶನಿವಾರ ಸಂಜೆ ಪ್ರಾರಂಭವಾದ ಪೂಜಾ ಕಾರ್ಯಕ್ರಮಗಳು ಭಾನುವಾರವಿಡೀ ನಡೆಯಿತು. ಶನಿವಾರ ಗಂಗೆಪೂಜೆ, ಯಾಗಶಾಲಾ ಪ್ರವೇಶ, ಶ್ರೀ ವಿಷಕ್ಸೇನ ಆರಾಧನೆ, ಶ್ರೀ ಭಗವದ್ ವಾಸುದೇವ ಪುಣ್ಯಾಹ, ಅಂಕುರಾರ್ಪಣ ಹೋಮ, ನಡೆಯಿತು.
ಭಾನುವಾರ ಸುಪ್ರಭಾತ ಸೌಎ, ಪಿಂಡಿಕಾ ಪೂಜೆ, ರತ್ನನ್ಯಾಸ, ಶಿಲಾ ಅಷ್ಟಬಂಧನ, ವೇದಪಾರಾಯಣ, ಧ್ವಜ ಕುಂಭಾರಾದನೆ, ಕಳಶಾರಾಧನೆ, ಗೋಪೂಜೆ, ಸರ್ವದೇವರಿಗೆ ಮಹಾಭಿಷೇಕ, ನೇತ್ರೋನ್ಮಿಲನ ಮಹಾಮಂಗಳಾರತಿ, ಪ್ರಸಾದ, ಸನ್ಮಾನ, ಅನ್ನಸಂತರ್ಪಣೆ ವಿನಿಯೋಗ ಇತ್ಯಾದಿ ನಡೆಯಿತು.
ಶಾಸಕ ಬಿ.ಎನ್.ರವಿಕುಮಾರ್, ಚಿಮುಲ್ ನಿರ್ದೇಶಕರಾದ ಬಂಕ್ ಮುನಿಯಪ್ಪ, ಹುಜಗೂರು ರಾಮಣ್ಣ, ತಾ.ಪಂ ಮಾಜಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಮುಖಂಡರಾದ ಬಿ.ವಿ.ರಾಜೀವ್ ಗೌಡ, ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್ ಗೌಡ, ಆಂಜಿನಪ್ಪ(ಪುಟ್ಟು), ತಾದೂರು ರಘು, ಎಚ್.ಎನ್.ವಿಜಯಕುಮಾರ್ ಸೇರಿದಂತೆ ವಿವಿಧ ಮುಖಂಡರು ಪಾಲ್ಗೊಂಡಿದ್ದರು.