Home News ಶ್ರೀ ಅಭಯಾಂಜನೇಯಸ್ವಾಮಿ ಮತ್ತು ಶ್ರೀ ಅಭಯಗಣಪತಿ ಪ್ರತಿಷ್ಠಾಪನಾ ಮಹೋತ್ಸವ

ಶ್ರೀ ಅಭಯಾಂಜನೇಯಸ್ವಾಮಿ ಮತ್ತು ಶ್ರೀ ಅಭಯಗಣಪತಿ ಪ್ರತಿಷ್ಠಾಪನಾ ಮಹೋತ್ಸವ

0
Sidlaghatta Sonnenahalli Abhayanjaneya Swamy Abhaya GanapatiTemple

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು (Devaramallur) ಗ್ರಾಮ ಪಂಚಾಯಿತಿಯ ಸೋಣ್ಣೇನಹಳ್ಳಿ ಗೇಟ್ (Sonnenahalli Gate) ನಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಅಭಯಾಂಜನೇಯಸ್ವಾಮಿ (Abhayanjaneya Swamy) ಮತ್ತು ಶ್ರೀ ಅಭಯ ಗಣಪತಿ (Abhaya Ganapati) ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮ ನಡೆಯಿತು.

ಸೋಣೇನಹಳ್ಳಿ ಗೇಟ್‌ನಲ್ಲಿ ನೂತನವಾಗಿ ನಿರ್ಮಿಸಿರುವ ದೇವಾಲಯದಲ್ಲಿ ಬೆಳಿಗ್ಗೆ ದೇವರಿಗೆ ಅಭಿಷೇಕ ನಂತರ 5 ಗ್ರಾಮದ ಪ್ರದಕ್ಷಣೋತ್ಸವ, ಯಾಗಶಾಲಾ ಪ್ರವೇಶ, ದೇವರ ಪ್ರಾರ್ಥನೆ, ಅನುಜ್ಞೆ, ವಿಶ್ವಕ್ಷೀನಾರಾಧನೆ, ಪುಣ್ಯಾಹವಾಚನ, ಪಂಚಗವ್ಯ ಪೂಜೆ, ರಕ್ಷಾಬಂಧನ, ಮೃತ್ಸಂಗ್ರಹಣ, ಸೋಮಕುಂಭ ಆರಾಧನೆ, ವಾಸ್ತುಪೂಜೆ, ವಾಸ್ತು ಹೋಮ ನಡೆಯಿತು. ಬೆಳಿಗ್ಗೆ ಬ್ರಾಹೀ ಲಗ್ನದಲ್ಲಿ ವಿಗ್ರಹ ಪ್ರತಿಷ್ಠಾಪನೆ, ಪ್ರತಿಷ್ಠಾಪನಾ ಹೋಮಗಳು, ನೇತ್ರೋನಿಲನ, ಗೋಪುರ ಕಳಸ ಪ್ರತಿಭೆ, ನವಗ್ರಹ ಹೋಮ, ರಾಮತಾರಕ ಮಂತ್ರ ಹೋಮ, ದೇವರಿಗೆ ಏಕಾಂತ ಅಭಿಷೇಕ, ಗೋ ದರ್ಶನ, ಮಹಾಪೂರ್ಣಾಹುತಿ, ಮಹಾಕುಂಭ ಪ್ರೋಕ್ಷಣೆ, ವಿಶ್ವರೂಪ ದರ್ಶನ, ಸಾತ್ತುಮೊರೈ, ಆಷ್ಟಾವಧಾನ ಸೇವೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version