Home News ಕೋಟೆ ಶ್ರೀ ಆಂಜನೇಯ ಸ್ವಾಮಿಯ 27ನೇ ವಾರ್ಷಿಕೋತ್ಸವ

ಕೋಟೆ ಶ್ರೀ ಆಂಜನೇಯ ಸ್ವಾಮಿಯ 27ನೇ ವಾರ್ಷಿಕೋತ್ಸವ

0
Sidlaghatta Kote Anjaneya Swamy Temple

ಶಿಡ್ಲಘಟ್ಟ ನಗರದ ಅಶೋಕ ರಸ್ತೆಯಲ್ಲಿನ ಕೋಟೆ ಶ್ರೀ ಆಂಜನೇಯ ಸ್ವಾಮಿಯ 27ನೇ ವಾರ್ಷಿಕೋತ್ಸವ ಸಮಾರಂಭ ಭಾನುವಾರ ನಡೆಯಿತು.

ನಗರದ ಅಶೋಕ ರಸ್ತೆಯಲ್ಲಿರುವ ಪುರಾತನ ಪ್ರಸಿದ್ಧ ಸುಮಾರು 827 ವರ್ಷಗಳ ಇತಿಹಾಸವನ್ನು ಹೊಂದಿರುವ ಶ್ರೀ ಕೋಟೆ ಆಂಜನೇಯ ಸ್ವಾಮಿಯ 27 ನೇ ವರ್ಷದ ವಾರ್ಷಿಕೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

 ಶ್ರೀ ಆಂಜನೇಯ ಸ್ವಾಮಿಗೆ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಸುಪ್ರಭಾತ ಸೇವೆ, ಅಗ್ನಿಮುಖ, ಶ್ರೀ ಆಂಜನೇಯಸ್ವಾಮಿ ರಾಮತಾರಕ ಹೋಮ, ಗಾಯಿತ್ರಿ ನವಗ್ರಹ ಹೋಮ, ಪುಣ್ಯಾಹವಾಚನ, ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ, ಪೂರ್ಣಾಹುತಿ ನಡೆಯಿತು.

ಮಧ್ಯಾಹ್ನ  ಮಹಾ ನಿವೇದನ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು. ಸಾಯಂಕಾಲ 6 ಗಂಟೆಗೆ ನಗರದ ಪ್ರಮುಖ ಬೀದಿಗಳಲ್ಲಿ ಸ್ವಾಮಿಯ ಮುತ್ತಿನ ಪಲ್ಲಕ್ಕಿ ಉತ್ಸವವನ್ನು ಆಯೋಜಿಸಲಾಗಿತ್ತು. ಪ್ರಧಾನ ಅರ್ಚಕರಾದ ಮುರಳಿಧರ್ ಆಚಾರ್ ಹೋಮಗಳನ್ನು ಹಾಗೂ ವಿಶೇಷ ಪೂಜೆಗಳನ್ನು ನಡೆಸಿಕೊಟ್ಟರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version