ಪೂರ್ಣ ಪುಟ · Open full page

ಬಸ್ ನಿಲ್ದಾಣ, ಶೌಚಾಲಯ, ಆಟದ ಮೈದಾನ ಬೇಕು: ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳ ಬೇಡಿಕೆ

Students and officials seated on the stage at the childrens gram sabha at a government high school in Sidlaghatta taluk

Sidlaghatta : ಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲಯ ಮತ್ತು ಆಟದ ಮೈದಾನ ಸೇರಿದಂತೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳು ಒತ್ತಾಯಿಸಿದರು.

ತಾಲ್ಲೂಕಿನ ಮೇಲೂರು ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಗುರುವಾರ ಗ್ರಾಮ ಪಂಚಾಯಿತಿ ಮಟ್ಟದ ಮಕ್ಕಳ ಗ್ರಾಮಸಭೆ ನಡೆಯಿತು.

ಮಕ್ಕಳು ಇಟ್ಟ ಬೇಡಿಕೆಗಳೇನು?

  • ಬಸ್ ನಿಲ್ದಾಣ ಇಲ್ಲದ ಕಾರಣ ಪ್ರಯಾಣಿಕರು, ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ; ಮಳೆ ಬಂದಾಗ ನಿಲ್ಲಲು ಜಾಗವೂ ಇಲ್ಲ, ಆದ್ದರಿಂದ ನಿಲ್ದಾಣ ಮತ್ತು ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು
  • ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಿದ್ದರೂ ಚಿತ್ರಕಲೆ ಕಲಿಯಲು ಬೇಕಾದ ಪರಿಕರಗಳಿಲ್ಲ, ಅವುಗಳನ್ನು ಒದಗಿಸಬೇಕು
  • ಆಟದ ಮೈದಾನ ಇಲ್ಲದೆ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ತೊಂದರೆಯಾಗುತ್ತಿದೆ, ಶಾಲೆಗೆ ಮೈದಾನ ಕಲ್ಪಿಸಬೇಕು
  • ತಾವು ವಾಸಿಸುವ ಪ್ರದೇಶಗಳ ಹದಗೆಟ್ಟ ರಸ್ತೆಗಳನ್ನು ದುರಸ್ತಿ ಮಾಡಬೇಕು
  • ಅಪ್ಪೇಗೌಡನಹಳ್ಳಿ ಗೇಟ್ ಬಳಿ ಮರದ ಬುಡದಲ್ಲಿ ಎಸೆದಿರುವ ದೇವರ ಚಿತ್ರಗಳನ್ನು ಗೌರವಯುತವಾಗಿ ತೆರವುಗೊಳಿಸಬೇಕು

ಅಧಿಕಾರಿಗಳು ಹೇಳಿದ್ದೇನು?

ಸಭೆಗೆ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಪಿ. ರವಿ ಮಾತನಾಡಿ, ಮಕ್ಕಳು ಶಿಕ್ಷಣದ ಜತೆಗೆ ತಮ್ಮ ಹಕ್ಕುಗಳ ಬಗ್ಗೆಯೂ ತಿಳಿದುಕೊಳ್ಳಬೇಕು; ವಿದ್ಯಾರ್ಥಿ ದೆಸೆಯಿಂದಲೇ ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದರು. ತಮ್ಮ ಸಮಸ್ಯೆಗಳ ಜತೆಗೆ ಸಾರ್ವಜನಿಕರ ಸಮಸ್ಯೆಗಳತ್ತಲೂ ಗಮನಹರಿಸಬೇಕು, ಸ್ವಚ್ಛತೆಗೆ ಆದ್ಯತೆ ನೀಡಬೇಕು, ನೀರನ್ನು ಮಿತವಾಗಿ ಬಳಸಿ ಪೋಷಕರಿಗೂ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಪಿಡಿಒ ಕೆ.ವಿ. ಶಾರದಾ ಮಾತನಾಡಿ, ಪಂಚಾಯಿತಿ ಗ್ರಾಮಗಳ ಅಭಿವೃದ್ಧಿಯ ಜತೆಗೆ ಮಕ್ಕಳ ಹಕ್ಕುಗಳ ರಕ್ಷಣೆಗೂ ಆದ್ಯತೆ ನೀಡುತ್ತಿದೆ ಎಂದರು. ಮಕ್ಕಳು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು, ಪೌಷ್ಟಿಕ ಆಹಾರ ಸೇವಿಸಬೇಕು, ಪ್ಲಾಸ್ಟಿಕ್ ಬಳಸಬಾರದು, ಎಲ್ಲೆಂದರಲ್ಲಿ ಕಸ ಎಸೆಯದೆ ಮನೆಯ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಹಾಗೂ ಶಿಕ್ಷಣದಲ್ಲೂ ಉತ್ತಮ ಸಾಧನೆ ಮಾಡಬೇಕು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಆರ್.ಎ. ಉಮೇಶ್, ಮುಖ್ಯಶಿಕ್ಷಕ ಎಚ್.ಎಂ. ಭಾಸ್ಕರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಎಸ್.ಎಂ. ಸರೋಜ, ಸಮಿತಿ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಂಬಂಧಿತ ಸುದ್ದಿ: ಕಳೆದ ವರ್ಷದ ಮಕ್ಕಳ ಗ್ರಾಮಸಭೆ ಮತ್ತು ಮಕ್ಕಳ ದಿನಾಚರಣೆ ಕುರಿತ ವರದಿಗಳನ್ನೂ ನೋಡಿ; ಗ್ರಾಮಸಭೆಗಳ ಎಲ್ಲ ಸುದ್ದಿ.

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

Nearby

ಇದನ್ನೂ ಓದಿ

Exit mobile version