Home News ಹೈನುಗಾರರೇ ರಾಸು ವಿಮೆ ಮಾಡಿಸಿ, ನಷ್ಟದಿಂದ ಪಾರಾಗಿ: ಚೀಮುಲ್ ನಿರ್ದೇಶಕ ಬಂಕ್ ಮುನಿಯಪ್ಪ

ಹೈನುಗಾರರೇ ರಾಸು ವಿಮೆ ಮಾಡಿಸಿ, ನಷ್ಟದಿಂದ ಪಾರಾಗಿ: ಚೀಮುಲ್ ನಿರ್ದೇಶಕ ಬಂಕ್ ಮುನಿಯಪ್ಪ

0
CHIMUL director Bunk Muniyappa and officials with dairy farmers and retired society secretaries receiving cattle insurance and honorarium cheques

Sidlaghatta : ಹೈನುಗಾರಿಕೆಯಿಂದ ಗ್ರಾಮೀಣ ಆರ್ಥಿಕತೆಗೆ ಮಹತ್ವದ ಕೊಡುಗೆ ದೊರೆಯುತ್ತಿದ್ದು, ಹೈನುಗಾರರು ಅನಿರೀಕ್ಷಿತ ನಷ್ಟದಿಂದ ಪಾರಾಗಲು ರಾಸು ವಿಮೆ ಮಾಡಿಸಿಕೊಳ್ಳಬೇಕು. ಸರ್ಕಾರ ಹಾಗೂ ಒಕ್ಕೂಟದ ವಿವಿಧ ಕಲ್ಯಾಣ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಚೀಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ತಿಳಿಸಿದರು.

ನಗರದ ಚೀಮುಲ್ ಶಿಬಿರ ಕಚೇರಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ 2026–27ನೇ ಸಾಲಿನ ಗುಂಪು ರಾಸು ವಿಮೆ ಯೋಜನೆಯಡಿ 10 ಮಂದಿ ಹೈನುಗಾರರಿಗೆ ವಿಮೆ ಸೌಲಭ್ಯ ಹಾಗೂ 18 ಮಂದಿ ನಿವೃತ್ತ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ನಿವೃತ್ತಿ ಗೌರವಧನದ ಚೆಕ್‌ ಗಳನ್ನು ವಿತರಿಸಿ ಅವರು ಮಾತನಾಡಿದರು.

ಹೈನುಗಾರರಿಗೆ ಏನು ಸಲಹೆ ನೀಡಿದರು?

ಬಯಲುಸೀಮೆ ಭಾಗದ ಜನರಿಗೆ ಹೈನುಗಾರಿಕೆ ಜೀವನಾಧಾರವಾಗಿದ್ದು, ಹಾಲು ಉತ್ಪಾದಕರು ಗುಣಮಟ್ಟದ ಹಾಲು ಪೂರೈಸುವ ಮೂಲಕ ಸಹಕಾರ ಸಂಘಗಳು ಹಾಗೂ ಒಕ್ಕೂಟದ ಪ್ರಗತಿಗೆ ಕೈಜೋಡಿಸಬೇಕು. ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸುವ ಮೂಲಕ ಆರ್ಥಿಕ ನಷ್ಟದಿಂದ ರಕ್ಷಣೆ ಪಡೆಯಬೇಕು. ಒಕ್ಕೂಟದಿಂದ ದೊರೆಯುವ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಸಲಹೆ ನೀಡಿದರು.

ನಿವೃತ್ತ ಕಾರ್ಯದರ್ಶಿಗಳಿಗೆ ಏನು ಸಿಕ್ಕಿತು?

ಸಹಕಾರ ಸಂಘಗಳಲ್ಲಿ ಎರಡು–ಮೂರು ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಕಾರ್ಯದರ್ಶಿಗಳ ಸೇವೆ ಶ್ಲಾಘನೀಯ. ನಿವೃತ್ತ ಜೀವನ ಸುಖಕರವಾಗಿರಲಿ ಎಂಬ ಉದ್ದೇಶದಿಂದ ಒಕ್ಕೂಟವು ನೀಡಿರುವ ಗೌರವಧನವನ್ನು ಸಮರ್ಪಕವಾಗಿ ಬಳಸಿಕೊಂಡು ನೆಮ್ಮದಿಯ ಜೀವನ ನಡೆಸಬೇಕು ಎಂದು ಹೇಳಿದರು.

ಚೀಮುಲ್ ನಿರ್ದೇಶಕ ಹುಜುಗೂರು ರಾಮಣ್ಣ ಮಾತನಾಡಿ, ಹೈನುಗಾರರು ಗುಣಮಟ್ಟದ ಹಾಲು ಉತ್ಪಾದನೆಗೆ ಆದ್ಯತೆ ನೀಡುವುದರ ಜತೆಗೆ ಜಾನುವಾರುಗಳ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕು. ಹೈನುಗಾರರ ಹಿತಾಸಕ್ತಿಗೆ ಒಕ್ಕೂಟ ಬದ್ಧವಾಗಿದ್ದು, ವಿವಿಧ ಯೋಜನೆಗಳ ಮೂಲಕ ಅಗತ್ಯ ನೆರವು ನೀಡುತ್ತಿದೆ ಎಂದರು.

ಚೀಮುಲ್ ಶಿಬಿರದ ಉಪವ್ಯವಸ್ಥಾಪಕ ಡಾ. ರವಿಕಿರಣ್ ಮಾತನಾಡಿ, ಹೈನುಗಾರರು ಸರ್ಕಾರ ಹಾಗೂ ಚೀಮುಲ್‌ನಿಂದ ದೊರೆಯುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಹೈನುಗಾರಿಕೆಯನ್ನು ಅಭಿವೃದ್ಧಿಪಡಿಸಬೇಕು. ರಾಸು ವಿಮೆಯಿಂದ ದೊರೆತ ಹಣವನ್ನು ಮತ್ತೊಂದು ಹಸು ಖರೀದಿಸಲು ಬಳಸಿಕೊಂಡರೆ ಹಾಲಿನ ಉತ್ಪಾದನೆ ಹೆಚ್ಚಿಸುವುದರ ಜತೆಗೆ ಆರ್ಥಿಕ ಪ್ರಗತಿಯನ್ನೂ ಸಾಧಿಸಬಹುದು ಎಂದು ತಿಳಿಸಿದರು.

ವಿಸ್ತರಣಾಧಿಕಾರಿಗಳಾದ ಜಯಚಂದ್ರ, ಶಂಕರ್‌ ಕುಮಾರ್, ವಿಜಯ್‌ಕುಮಾರ್, ಸತ್ಯನಾರಾಯಣ ಸೇರಿದಂತೆ ಶಿಬಿರ ಘಟಕದ ಸಿಬ್ಬಂದಿ ಹಾಗೂ ಹೈನುಗಾರರು ಉಪಸ್ಥಿತರಿದ್ದರು.

ಹಿಂದಿನ ಗುಂಪು ರಾಸು ವಿಮೆ ಪರಿಹಾರ ವಿತರಣೆ ಕುರಿತು 22 ಹೈನುಗಾರರಿಗೆ ₹12.50 ಲಕ್ಷ ಗುಂಪು ರಾಸು ವಿಮೆ ಪರಿಹಾರ ಚೆಕ್ ವಿತರಣೆ ವರದಿಯನ್ನು, ಹಾಲು ಉತ್ಪಾದಕರ ಸಂಘಗಳ ಕುರಿತು ಸಹಕಾರ ಸಂಘಗಳಲ್ಲಿ ರಾಜಕೀಯಕ್ಕೆ ಅವಕಾಶ ಬೇಡ: ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ವರದಿಯನ್ನೂ ಓದಿ.

In English: CHIMUL (Chikkaballapur Milk Union) director Bunk Muniyappa urged dairy farmers to insure their cattle to protect themselves from unexpected losses and to make use of the welfare schemes of the government and the union. He was speaking at a programme at the CHIMUL camp office in Sidlaghatta on Wednesday, where insurance cover under the 2026–27 group cattle insurance scheme was given to 10 dairy farmers and honorarium cheques were handed to 18 retired secretaries of milk producers’ cooperative societies. Fellow director Hujugur Ramanna urged farmers to prioritise milk quality and cattle health, and camp deputy manager Dr. Ravikiran said insurance money can be used to buy another cow to raise milk production and income.

FAQ

ಹೈನುಗಾರರು ರಾಸು ವಿಮೆ ಏಕೆ ಮಾಡಿಸಬೇಕು?
ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸುವ ಮೂಲಕ ಅನಿರೀಕ್ಷಿತ ಆರ್ಥಿಕ ನಷ್ಟದಿಂದ ರಕ್ಷಣೆ ಪಡೆಯಬಹುದು ಎಂದು ಚೀಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಸಲಹೆ ನೀಡಿದ್ದಾರೆ.

ರಾಸು ವಿಮೆಯ ಹಣವನ್ನು ಹೇಗೆ ಬಳಸಬಹುದು?
ವಿಮೆ ಹಣದಿಂದ ಮತ್ತೊಂದು ಹಸು ಖರೀದಿಸಿದರೆ ಹಾಲಿನ ಉತ್ಪಾದನೆ ಹೆಚ್ಚಿಸಿ ಆರ್ಥಿಕ ಪ್ರಗತಿ ಸಾಧಿಸಬಹುದು ಎಂದು ಚೀಮುಲ್ ಶಿಬಿರದ ಉಪವ್ಯವಸ್ಥಾಪಕ ಡಾ. ರವಿಕಿರಣ್ ತಿಳಿಸಿದ್ದಾರೆ.

For Daily Updates WhatsApp ‘HI’ to 7406303366

error: Content is protected !!
Exit mobile version