Home News ತಾಲ್ಲೂಕಿನ 24 ಗ್ರಾಮ ಪಂಚಾಯಿತಿ ಕ್ಷೇತ್ರ ವಿಭಜನೆ, ಮೀಸಲಾತಿ ಪಟ್ಟಿ ಪ್ರಕಟ

ತಾಲ್ಲೂಕಿನ 24 ಗ್ರಾಮ ಪಂಚಾಯಿತಿ ಕ್ಷೇತ್ರ ವಿಭಜನೆ, ಮೀಸಲಾತಿ ಪಟ್ಟಿ ಪ್ರಕಟ

0
Sidlaghatta Taluk Grama Panchayat Office Leaders Reservation

Sidlaghatta : ಶಿಡ್ಲಘಟ್ಟ ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳ ಕ್ಷೇತ್ರ ವಿಭಜನೆ ಹಾಗೂ ಮೀಸಲಾತಿ ಪಟ್ಟಿಯನ್ನು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪ್ರಭು.ಜಿ (ಭಾ.ಆ.ಸೇ.) ಅವರು ಪ್ರಕಟಿಸಿದ್ದಾರೆ.

ಕರ್ನಾಟಕ ಸರ್ಕಾರವು ಹೊರಡಿಸಿರುವ ವಿಶೇಷ ರಾಜ್ಯಪತ್ರದ ಅಧಿಸೂಚನೆ (ಸಂಖ್ಯೆ: ಡಿಸಿ/ಚು(2)/ಸಿಆರ್-02/2026-27) ಯನ್ವಯ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಅಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕ್ಷೇತ್ರ ಮರುವಿಂಗಡಣೆ ಹಾಗೂ ಸ್ಥಾನಗಳ ಹಂಚಿಕೆಯನ್ನು ಮಾಡಲಾಗಿದೆ.

ತಾಲ್ಲೂಕಿನ ಆರು ಗ್ರಾಮ ಪಂಚಾಯಿತಿಗಳ ಕ್ಷೇತ್ರವಾರು ವಿವರ ಈ ಕೆಳಗಿನಂತಿದೆ: ಅಬ್ಲೂಡು (ಒಟ್ಟು 3 ಸ್ಥಾನ), ಚಾಗೆ (1), ಶೆಟ್ಟಿಹಳ್ಳಿ (3), ಚೀಮನಹಳ್ಳಿ (2), ಗುಡಿಹಳ್ಳಿ (2), ಕೋಟಹಳ್ಳಿ (1), ಕೆಂಪನಹಳ್ಳಿ (1), ಸಾದಹಳ್ಳಿ (1) ಹಾಗೂ ತಾತಹಳ್ಳಿ (2) ಸೇರಿ ಅಬ್ಲೂಡು ಗ್ರಾ.ಪಂ.ಗೆ ಒಟ್ಟು 09 ಕ್ಷೇತ್ರ, 16 ಸ್ಥಾನಗಳಿವೆ. ಇದೇ ರೀತಿ ವೈ.ಹುಣಸೇನಹಳ್ಳಿ ಗ್ರಾ.ಪಂ.ಗೆ 08 ಕ್ಷೇತ್ರ 17 ಸ್ಥಾನ, ದೇವರಮಳ್ಳೂರು ಗ್ರಾ.ಪಂ.ಗೆ 07 ಕ್ಷೇತ್ರ 16 ಸ್ಥಾನ, ಕೊತ್ತನೂರು ಗ್ರಾ.ಪಂ.ಗೆ 05 ಕ್ಷೇತ್ರ 11 ಸ್ಥಾನ, ತುಮ್ಮನಹಳ್ಳಿ ಗ್ರಾ.ಪಂ.ಗೆ 10 ಕ್ಷೇತ್ರ 17 ಸ್ಥಾನ ಹಾಗೂ ಆನೂರು ಗ್ರಾ.ಪಂ.ಗೆ 07 ಕ್ಷೇತ್ರ 16 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ.

ತಾಲ್ಲೂಕಿನ ಇತರೆ ಪ್ರಮುಖ ಗ್ರಾಮ ಪಂಚಾಯಿತಿಗಳ ಒಟ್ಟು ಕ್ಷೇತ್ರ ಮತ್ತು ಸ್ಥಾನಗಳ ವಿವರ ಕೆಳಗಿನ ಪಟ್ಟಿಯಲ್ಲಿದೆ:

ಗ್ರಾಮ ಪಂಚಾಯಿತಿಕ್ಷೇತ್ರಗಳುಒಟ್ಟು ಸ್ಥಾನಗಳು
ಹಂಡಿಗನಾಳ715
ಮೇಲೂರು615
ಮಳ್ಳೂರು615
ಜೆ.ವೆಂಕಟಾಪುರ717
ಜಂಗಮಕೋಟೆ617
ಕುಂಭಿಗಾನಹಳ್ಳಿ1020
ಚೀಮಂಗಲ816
ದೊಡ್ಡತೇಕಹಳ್ಳಿ717
ಬಶೆಟ್ಟಿಹಳ್ಳಿ917
ದಿಬ್ಬರಹಳ್ಳಿ615
ತಿಮ್ಮನಾಯಕನಹಳ್ಳಿ814
ಗಂಜಿಗುಂಟೆ1016
ಈ.ತಿಮ್ಮಸಂದ್ರ816
ಸಾದಲಿ617
ಎಸ್.ದೇವಗಾನಹಳ್ಳಿ815
ಪಲಿಚೇರ್ಲು613
ಕುಂದಲಗುರ್ಕಿ512
ತಲಕಾಯಲಬೆಟ್ಟ814

ಜಿಲ್ಲಾಡಳಿತವು ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಹಿಂದುಳಿದ ವರ್ಗ ‘ಅ’ ಮತ್ತು ‘ಬ’ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಸ್ಥಾನಗಳನ್ನು ಕಾಯ್ದಿರಿಸಿದೆ. ವಿಶೇಷವಾಗಿ, ಪ್ರತಿಯೊಂದು ಪಂಚಾಯಿತಿಯಲ್ಲೂ ಮಹಿಳಾ ಪ್ರಾತಿನಿಧ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಬಹುತೇಕ ಕ್ಷೇತ್ರಗಳಲ್ಲಿ ‘ಮಹಿಳಾ ಮೀಸಲಾತಿ’ಯನ್ನು ಪ್ರತ್ಯೇಕವಾಗಿ ನಿಗದಿಪಡಿಸಲಾಗಿದೆ.

ಜಿಲ್ಲಾಡಳಿತವು ಅಧಿಕೃತವಾಗಿ ಕ್ಷೇತ್ರವಾರು ವಿಭಜನೆ ಹಾಗೂ ಮೀಸಲಾತಿ ಪಟ್ಟಿಯನ್ನು ಗಂಟೆಗಳ ಹಿಂದೆಯಷ್ಟೇ ಅಂತಿಮಗೊಳಿಸಿರುವುದರಿಂದ, ಹಳ್ಳಿಗಳ ಮಟ್ಟದಲ್ಲಿ ಈಗಲೇ ಚುನಾವಣಾ ಕಣ ಕಾವೇರಲಾರಂಭಿಸಿದೆ. ಆಯಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಆಕಾಂಕ್ಷಿ ಅರಸುತ್ತಿದ್ದ ಸ್ಥಳೀಯ ನಾಯಕರು ತಮ್ಮ ತಮ್ಮ ಕ್ಷೇತ್ರಗಳ ಮೀಸಲಾತಿ ನೋಡಿ ಮುಂದಿನ ರಾಜಕೀಯ ತಂತ್ರಗಾರಿಕೆಗೆ ಅಖಾಡ ಸಿದ್ಧಪಡಿಸುತ್ತಿದ್ದಾರೆ. ನಿಮ್ಮ ಗ್ರಾಮದ ವಾರ್ಡ್ ಯಾರಿಗೆ ಮೀಸಲಾಗಿದೆ ಎಂಬ ಸಂಪೂರ್ಣ ವಿವರ ತಿಳಿಯಲು ಸ್ಥಳೀಯ ಗ್ರಾಮ ಪಂಚಾಯಿತಿ ಕಾರ್ಯಾಲಯ ಅಥವಾ ಜಿಲ್ಲಾ ವೆಬ್‌ಸೈಟ್ ಸಂಪರ್ಕಿಸಬಹುದು.

In English: The Chikkaballapura district administration has officially finalized the ward delimitation and reservation list for member seats across 24 grama panchayats in Sidlaghatta taluk, under the Karnataka Gram Swaraj and Panchayat Raj Act, 1993. The list allocates seats among SC, ST, backward classes A and B, general category, and women candidates. With the notification issued just hours ago, prospective candidates at the village level have begun consulting political leaders based on their ward’s reservation status ahead of the upcoming grama panchayat elections. Full ward-wise details are available at respective panchayat offices or the district website.

FAQ

ಪ್ರಶ್ನೆ 1: ಇತ್ತೀಚಿನ ಅಧಿಸೂಚನೆಯಲ್ಲಿ ಏನನ್ನು ಪ್ರಕಟಿಸಲಾಗಿದೆ?
ಚಿಕ್ಕಬಳ್ಳಾಪುರ ಜಿಲ್ಲಾಡಳಿತವು ಶಿಡ್ಲಘಟ್ಟ ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಗಳ ಕ್ಷೇತ್ರ ವಿಭಜನೆ ಹಾಗೂ ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸಿ ಪ್ರಕಟಿಸಿದೆ.

ಪ್ರಶ್ನೆ 2: ನನ್ನ ಗ್ರಾಮದ ವಾರ್ಡ್ ಮೀಸಲಾತಿ ವಿವರ ಎಲ್ಲಿ ಸಿಗುತ್ತದೆ?
ಸಂಪೂರ್ಣ ಕ್ಷೇತ್ರವಾರು ಮೀಸಲಾತಿ ಪಟ್ಟಿ ಸ್ಥಳೀಯ ಗ್ರಾಮ ಪಂಚಾಯಿತಿ ಕಾರ್ಯಾಲಯ ಅಥವಾ ಜಿಲ್ಲಾ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version