Home News 5 ಸಾವಿರ ಲೀಟರ್ ಸಾಮರ್ಥ್ಯದ ಬಿಎಂಸಿ ಕೇಂದ್ರ ಉದ್ಘಾಟನೆ

5 ಸಾವಿರ ಲೀಟರ್ ಸಾಮರ್ಥ್ಯದ ಬಿಎಂಸಿ ಕೇಂದ್ರ ಉದ್ಘಾಟನೆ

0
KoChimul Milk Repository Dairy Inauguration

ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 5 ಸಾವಿರ ಲೀಟರ್ ಸಾಮರ್ಥ್ಯದ ಬಿಎಂಸಿ ಘಟಕವನ್ನು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ(ಕೋಚಿಮುಲ್) ಹಾಗೂ ಕೆಎಂಎಫ್ ನಿರ್ದೇಶಕ ಆರ್.ಶ್ರೀನಿವಾಸ್ ಉದ್ಘಾಟಿಸಿ ಮಾತನಾಡಿ, ಮಳಮಾಚನಹಳ್ಳಿಯಲ್ಲಿನ ಬಿಎಂಸಿ ಘಟಕವು ಜಿಲ್ಲೆಯಲ್ಲೆ ಅತಿ ದೊಡ್ಡದಾದ ಘಟಕವಾಗಿದ್ದು ಇದರಲ್ಲಿ 5 ಸಾವಿರ ಲೀಟರ್ ಹಾಲನ್ನು ಸಂಗ್ರಹಿಸಬಹುದಾಗಿದೆ  ಎಂದರು.

ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿಯೆ ಅತಿ ಹೆಚ್ಚಿ ಹಾಲು ಸಂಗ್ರಹವಾಗುವ ಡೇರಿ ಇದಾಗಿದ್ದು ಕಳೆದ ಹಲವು ವರ್ಷಗಳಿಂದಲೂ ಮೊದಲ ಸ್ಥಾನವನ್ನು ಉಳಿಸಿಕೊಂಡು ಬರುತ್ತಿರುವುದು ಸಣ್ಣ ವಿಷಯವೇನಲ್ಲ ಎಂದು ಹೇಳಿದರು.

ಪ್ರತಿ ನಿತ್ಯ 250 ಕ್ಕೂ ಹೆಚ್ಚು ಹೈನುಗಾರರು ಇಲ್ಲಿ ಹಾಲನ್ನು ಹಾಕುತ್ತಿದ್ದು 3800 ಲೀಟರ್‌ನಷ್ಟು ಹಾಲು ಸಂಗ್ರಹವಾಗುವ ಮೂಲಕ ಎರಡೂ  ಜಿಲ್ಲೆಗಳಲ್ಲೂ ಅತಿ ಹೆಚ್ಚು ಹಾಲು ಶೇಖರಣೆಯಾಗುವ ಮೊದಲ ಡೇರಿ ಎಂಬ ಹೆಗ್ಗಳಿಕೆ ತನ್ನದಾಗಿಸಿಕೊಂಡಿದೆ ಎಂದು ವಿವರಿಸಿದರು.

ಕೊರೊನಾದಂತ ಸಂಕಷ್ಟದ ಸಮಯದಲ್ಲೂ ಹೈನುಗಾರಿಕೆಯು ಲಕ್ಷಾಂತರ ರೈತರ ಬದುಕಿಗೆ ನೆರವಾಯಿತು. ಬೇರೆಲ್ಲಾ ಕ್ಷೇತ್ರಗಳಲ್ಲಿಯೂ ಸಮಸ್ಯೆಗಳು ಎದುರಾದರೂ ಹೈನು ಕ್ಷೇತ್ರದಲ್ಲಿ ಮಾತ್ರ ರೈತನ ಕೈ ಹಿಡಿದಿದ್ದನ್ನು ಯಾರೂ ಮರೆಯಬಾರದು ಎಂದರು.

ರೈತನ ಹಿತಕ್ಕಾಗಿ ಒಕ್ಕೂಟವು ಎಂದಿಗೂ ಸಿದ್ದವಾಗಿದ್ದು ಅದಕ್ಕೆ ಅನೇಕ ಯೋಜನೆಗಳನ್ನು ರೂಪಿಸಿದೆ. ರೈತರು ಮುಖ್ಯವಾಗಿ ತಮ್ಮ ರಾಸುಗಳಿಗೆ ಜೀವ ವಿಮೆಯನ್ನು ಮಾಡಿಸುವುದನ್ನು ಮಾತ್ರ ಮರೆಯಬಾರದು ಎಂದು ಮನವಿ ಮಾಡಿದರು.

ಅನೇಕ ರೈತರು ವಿಮೆ ಮಾಡಿಸುವುದಿಲ್ಲ. ನಾನಾ ಕಾರಣಗಳಿಂದ ಬೆಲೆ ಬಾಳುವ ಸೀಮೆ ಹಸು ಮೃತಪಟ್ಟಾಗ ನಮ್ಮ ಬಳಿ ಇಲ್ಲವೇ ಅಕಾರಿಗಳ ಬಳಿ ಬಂದು ಏನು ಮಾಡೋದು ಸಹಾಯ ಮಾಡಿ ಎಂದು ನಿಲ್ಲುತ್ತಾರೆ ಆಗ ನಾವು ಏನೂ ಮಾಡದ ಸ್ಥಿತಿಯಲ್ಲಿರುತ್ತೇವೆ ಎಂದು ಹೇಳಿದರು.

ಆದ್ದರಿಂದ ರೈತರು ಯಾರ ಬಳಿಯೂ ಕೈಕಟ್ಟಿ ನಿಲ್ಲಬಾರದು ಎಂದರೆ ಜೀವ ವಿಮೆ ಮಾಡಿಸಬೇಕು, ಆಕಸ್ಮಿವಾಗಿ ಸೀಮೆ ಹಸು ಮೃತಪಟ್ಟರೆ ಹಣ ಬರುತ್ತದೆ, ವಿಮೆ ಮಾಡಿಸುವ ಬಗ್ಗೆ ನಮ್ಮ ಇಲಾಖೆಯ ಅಕಾರಿಗಳು ಹಾಗೂ ಸಿಬ್ಬಂದಿ, ಡೇರಿಗಳಲ್ಲೂ ಹೆಚ್ಚು ಪ್ರಚಾರ ಅರಿವು ಮೂಡಿಸುವ ಕಾರ‍್ಯ ನಡೆಯುತ್ತಿದೆ ಎಂದು ಹೇಳಿದರು.

ಮಳಮಾಚನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷ ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ಲೋಕನಾಥ್, ಸಂಘದ ಕಾರ‍್ಯದರ್ಶಿ ಆರ್.ಚಂದ್ರಾಚಾರಿ, ನಿರ್ದೇಶಕರುಗಳಾದ ಎಂ.ಎನ್ .ರಾಮಚಂದ್ರಚಾರಿ, ರಾಜಣ್ಣ, ಶಿಡ್ಲಘಟ್ಟ ಶಿಬಿರ ವಿಸ್ತರಣಾಕಾರಿ ಶ್ರೀನಿವಾಸ್ ಹಾಜರಿದ್ದರು.

 

Like, Follow, Share ನಮ್ಮ ಶಿಡ್ಲಘಟ್ಟ

Facebook: https://www.facebook.com/sidlaghatta

Instagram: https://www.instagram.com/sidlaghatta

Telegram: https://t.me/Sidlaghatta

Twitter: https://twitter.com/hisidlaghatta

ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:

WhatsApp: https://wa.me/917406303366?text=Hi

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version