Home News ಬಚ್ಚಲು ಗುಂಡಿ ನಿರ್ಮಿಸಿಕೊಂಡ ಗ್ರಾಮಸ್ಥರಿಗೆ ದಿನಸಿ ಕಿಟ್ ವಿತರಣೆ

ಬಚ್ಚಲು ಗುಂಡಿ ನಿರ್ಮಿಸಿಕೊಂಡ ಗ್ರಾಮಸ್ಥರಿಗೆ ದಿನಸಿ ಕಿಟ್ ವಿತರಣೆ

0
Kumbiganahalli covid aid government facilities sink tank

ತಾಲ್ಲೂಕಿನ ಕುಂಭಿಗಾನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದೇವೇನಹಳ್ಳಿ ಗ್ರಾಮದಲ್ಲಿ ಬಚ್ಚಲು ಗುಂಡಿ ನಿರ್ಮಿಸಿಕೊಂಡ ಇಪ್ಪತ್ತು ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ನೀಡಿ ಕಾಂಗ್ರೆಸ್ ಮುಖಂಡ ಡಿ.ಸಿ.ಮುನಿರಾಜು ಮಾತನಾಡಿದರು.

ಮನೆಯ ನೀರನ್ನು ರಸ್ತೆ ಅಥವಾ ಮನೆಯ ಸುತ್ತ ಮುತ್ತ ಹರಿಯಲು ಬಿಡದೇ ಬಚ್ಚಲು ಗುಂಡಿ ನಿರ್ಮಿಸಿಕೊಂಡಲ್ಲಿ ಜಲ ಮರುಪೂರಣಗೊಳ್ಲಲಿದೆ. ಸರ್ಕಾರ ಇದಕ್ಕಾಗಿ ಸಹಾಯಧನವನ್ನೂ ನೀಡುತ್ತಿದೆ. ಈ ರೀತಿ ಬಚ್ಚಲು ಗುಂಡಿಗಳನ್ನು ನಿರ್ಮಿಸಿಕೊಂಡವರಿಗೆ ಪ್ರೋತ್ಸಾಹಕವಾಗಿ ಮತ್ತು ಕೊರೊನಾ ಸಂಕಷ್ಟದಲ್ಲಿ ಸಹಾಯವಾಗಲೆಂದು ದಿನಸಿ ಕಿಟ್ ವಿತರಿಸಿತ್ತಿರುವುದಾಗಿ ಅವರು ತಿಳಿಸಿದರು.

 ಸರ್ಕಾರ ನರೇಗ ಮೂಲಕ, ಗ್ರಾಮ ಪಂಚಾಯಿತಿ ಮೂಲಕ ಹಲವು ಯೋಜನೆಗಳನ್ನು ರೂಪಿಸಿದೆ. ಅವುಗಳನ್ನು ಎಲ್ಲರೂ ಬಳಕೆ ಮಾಡಿಕೊಳ್ಳಬೇಕು. ನಮ್ಮ ಮನೆಯಿಂದ ಹೊರ ಹೋಗುವ ನೀರಿನಿಂದ ತರಕಾರಿ ಬೆಳೆಯಬಹುದು. ನೀರನ್ನು ವ್ಯಯ ಮಾಡದೇ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version