Home News ಶ್ರೀ ಬಸವೇಶ್ವರ ದೇವಾಲಯದ ಮೂರನೇ ವರ್ಷದ ವಾರ್ಷಿಕೋತ್ಸವ

ಶ್ರೀ ಬಸವೇಶ್ವರ ದೇವಾಲಯದ ಮೂರನೇ ವರ್ಷದ ವಾರ್ಷಿಕೋತ್ಸವ

0
Sidlaghatta H Cross Kalinayakanahalli Basaveshwara temple Anniversary

Kumbiganahalli, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಎಚ್.ಕ್ರಾಸ್(ಕುಂಭಿಗಾನಹಳ್ಳಿ) ಗ್ರಾಮ ಪಂಚಾಯಿತಿಯ ಕಾಳಿನಾಯಕನಹಳ್ಳಿಯಲ್ಲಿನ ಶ್ರೀ ಬಸವೇಶ್ವರ ದೇವಾಲಯದ ಮೂರನೇ ವರ್ಷದ ವಾರ್ಷಿಕೋತ್ಸವ ಗುರುವಾರ ನಡೆಯಿತು. ವಾರ್ಷಿಕೋತ್ಸವ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆ ಪುನಸ್ಕಾರ ಹೋಮ ನಡೆಸಲಾಯಿತು.

ಗಿರಿಜಾ ಕಲ್ಯಾಣೋತ್ಸವ ಹಾಗೂ ಪ್ರಾಕಾರೋತ್ಸವ ಸೇರಿದಂತೆ ನಾನಾ ಹೋಮಗಳೊಂದಿಗೆ ಪೂಜೆ ನೆರವೇರಿಸಿ ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.

ನೆರೆದಿದ್ದ ಎಲ್ಲ ಭಕ್ತರು, ದೇವಾಲಯದ ಭಕ್ತ ಕುಟುಂಬಗಳು ಹಾಗೂ ಗ್ರಾಮಸ್ಥರಿಗೆ ಸಾಮೂಹಿಕ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಪ್ರಧಾನ ಅರ್ಚಕ ಸಂಕೇತ್ ದೀಕ್ಷಿತ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಡೆದವು.

ಪಿಎಲ್‌ಡಿ ಬ್ಯಾಂಕ್‌ನ ಮಾಜಿ ಅಧ್ಯಕ್ಷರು ಹಾಗೂ ದೇವಾಲಯದ ಸಮಿತಿ ಮುಖ್ಯಸ್ಥರಾದ ಕೆ.ಎಂ.ಭೀಮೇಶ್, ಕೆಎಂಎಫ್ ನಿರ್ದೇಶಕ ಆರ್.ಶ್ರೀನಿವಾಸ್, ಮಂಜಯ್ಯ, ಸುರೇಶ್, ಲಕ್ಷ್ಮೀಶ್, ರಾಜು, ಆನಂದ್, ಕಾಂಗ್ರೆಸ್ ಮುಖಂಡರಾದ ಗೌತಮ್, ಪುಟ್ಟು ಆಂಜಿನಪ್ಪ, ಎಚ್.ಕ್ರಾಸ್ ಅಯ್ಯಪ್ಪಣ್ಣ, ಬೈರೇಗೌಡ, ನಾಗರಾಜ್, ಎಚ್.ಕ್ರಾಸ್ ಗ್ರಾಮಪಂಚಾಯಿತಿ ಅಧ್ಯಕ್ಷ ನಾಗರಾಜ್, ಪುಟ್ಟರಾಜು ಇನ್ನಿತರರು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version