Home News ಶಾಲಾ ಹಳೆಯ ವಿದ್ಯಾರ್ಥಿಗಳಿಂದ ಟ್ರ್ಯಾಕ್‌ ಸೂಟ್ ವಿತರಣೆ: ಸರ್ಕಾರಿ ಶಾಲೆಗೆ ಕೊಡುಗೆ

ಶಾಲಾ ಹಳೆಯ ವಿದ್ಯಾರ್ಥಿಗಳಿಂದ ಟ್ರ್ಯಾಕ್‌ ಸೂಟ್ ವಿತರಣೆ: ಸರ್ಕಾರಿ ಶಾಲೆಗೆ ಕೊಡುಗೆ

0
Melur Government High School Alumni Track Suit Distribution

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಸರ್ಕಾರಿ ಪ್ರೌಢಶಾಲೆಯ 2010–11ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಶನಿವಾರ ಶಾಲೆಯ ಪ್ರಸಕ್ತ ಸಾಲಿನ ಎಲ್ಲ ವಿದ್ಯಾರ್ಥಿಗಳಿಗೆ ಟ್ರ್ಯಾಕ್‌ ಸೂಟ್‌ಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್‌.ಎ.ಉಮೇಶ್, “ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಗಳಲ್ಲಿ ಇದ್ದರೂ ತಾವು ಕಲಿತ ಶಾಲೆಯನ್ನು ಮರೆಯದೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವುದು ಮಾದರಿಯಾಗಿದೆ. ಹಳೆಯ ವಿದ್ಯಾರ್ಥಿಗಳ ಇಂತಹ ಕಾರ್ಯಗಳಿಂದ ಮಕ್ಕಳಲ್ಲಿ ಶಾಲೆಯ ಬಗ್ಗೆ ಅಭಿಮಾನ ಹಾಗೂ ಕ್ರೀಡಾ ಚಟುವಟಿಕೆಗಳ ಬಗ್ಗೆ ಆಸಕ್ತಿ ಹೆಚ್ಚಲಿದೆ. ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಎಲ್ಲರ ಸಹಕಾರ ಅಗತ್ಯ” ಎಂದರು.

ಹಳೆಯ ವಿದ್ಯಾರ್ಥಿ ಜಿ.ಡಿ.ಸುಭ್ರಮಣಿ ಮಾತನಾಡಿ, “ನಾವು ಕಲಿತ ಶಾಲೆ ನಮಗೆ ಬದುಕು ರೂಪಿಸಿಕೊಟ್ಟಿದೆ. ಈ ಶಾಲೆಯಿಂದಾಗಿ ಇಂದು ಉತ್ತಮ ಸ್ಥಾನದಲ್ಲಿದ್ದೇವೆ. ಶಾಲೆಗೆ ಕಿರು ಕೊಡುಗೆಯಾಗಿ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಶಾಲೆಯ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡುತ್ತೇವೆ” ಎಂದರು.

ಮುಖ್ಯಶಿಕ್ಷಕ ಎಚ್‌.ಎಂ.ಭಾಸ್ಕರ್ ಮಾತನಾಡಿ, ಸರ್ಕಾರಿ ಶಾಲೆಗಳ ಬಗ್ಗೆ ಇರುವ ಕೀಳರಿಮೆಯನ್ನು ಹೋಗಲಾಡಿಸಿ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವಲ್ಲಿ ಹಳೆಯ ವಿದ್ಯಾರ್ಥಿಗಳ ಕಾರ್ಯ ಮಹತ್ವದ್ದಾಗಿದೆ. ಇದರಿಂದ ಮಕ್ಕಳಲ್ಲಿ ಕ್ರೀಡಾ ಮನೋಭಾವವೂ ಹೆಚ್ಚಲಿದೆ ಎಂದು ಹೇಳಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸರೋಜ ಎಸ್‌.ಎಂ., ಉಪಾಧ್ಯಕ್ಷ ಸಂಪತ್, ಸದಸ್ಯರಾದ ಸೀನಪ್ಪ, ರಾಧಮ್ಮ, ಹಳೆಯ ವಿದ್ಯಾರ್ಥಿಗಳಾದ ಅಭಿಷೇಕ್‌, ಪೂರ್ಣಿಮಾ, ಮೂಕಾಂಬಿಕಾ, ಗೌತಮಿ, ಪವನ್‌, ಮಲ್ಲಿಕಾ, ಶ್ರೀಲೇಖಾ, ಮನೋಹರ್‌, ಅಶ್ವಿನಿ, ಅಂಜಲಿ, ಸ್ವಪ್ನ, ಸುಕನ್ಯಾ ಹಾಗೂ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಇದೇ ಶಾಲೆಯ 1972–73ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಗುರುವಂದನ ಹಾಗೂ ಸುವರ್ಣ ಮಹೋತ್ಸವ ಕಾರ್ಯಕ್ರಮ ಆಯೋಜಿಸಿದ್ದರು.

In English: Alumni of the 2010-11 batch of Melur Government High School in Sidlaghatta taluk distributed track suits to all current students of the school on Saturday. Former Gram Panchayat president RA Umesh, alumnus GD Subramani, and headmaster HM Bhaskar spoke at the event, praising the alumni for giving back to their alma mater and encouraging sporting spirit among students.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version