
Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಉಮಾಮಹೇಶ್ವರಿ ದೇವಸ್ಥಾನದಲ್ಲಿ, ಮೇ 21 ಮತ್ತು 22 ರಂದು ವಾರ್ಷಿಕೋತ್ಸವ, ಕಲ್ಯಾಣೋತ್ಸವ, ದೇವರ ವರ್ಧಂತಿ ಉತ್ಸವ, ಹಾಗೂ ಗಿರಿಜಾ ಕಲ್ಯಾಣ ಮಹೋತ್ಸವವನ್ನು ಆಯೋಜನೆ ಮಾಡಲಾಗಿದೆ.
ಮೇ 21 ರಂದು ಸಂಜೆ ಮಹಾಗಣಪತಿ ಪ್ರಾರ್ಥನೆ, ಮಹಾಗಣಪತಿ ಪೂಜೆ, ವಾಸ್ತು ಪ್ರಾರ್ಥನೆ, ಕ್ಷೇತ್ರ ಪಾಲ ಪ್ರಾರ್ಥನೆ, ಗಂಗಾ, ಯಮುನಾ ಪೂಜೆ, ಮಹಾಕುಂಭ ಆಗಮನ, ವರುಣ ಪೂಜೆ, ಪುಣ್ಯಾಹ ಶುದ್ದಿ ಕರ್ಮ, ಋತ್ವಿಕವರ್ಣನೆ, ಕಲಶ ಪೂಜೆ, ಭೂದೇವತಾ ಪೂಜೆ, ಪ್ರಾರ್ಥನೆ, ಮರ್ತಿಕಾ ಸಂಗ್ರಹಣೆ, ದೇವನಾಂದಿ, ಕಂಕಣ ಧಾರಣೆ, ಮಧುಪರ್ಕ ಶುದ್ಧಿ ಹೋಮ, ಧ್ವಜಾರೋಹಣ, ಮಹಾಗಣಪತಿ ಉಪನಿಷತ್, ಹವನ, ವಿಶ್ವಕರ್ಮ ಪೂಜೆ, ವಿಗ್ರಹ ಪರಿಗ್ರಹಣ ವಿಕಿರಣ, ಬಿಂಬಾದಿವಾಸ, ವಾಸ್ತು ವಿಧಾನ, ರಾಕ್ಷೋಘ್ನ ವಿಧಿ, ಮಹಾ ಕುಂಭ ಸ್ಥಾಪನೆ, ವಾಸ್ತು ರಾಕ್ಷೋಘ್ನ ಹವನ, ಅಘೋರಾಸ್ತ್ರ ಹವನ, ಸುದರ್ಶನಾದಿ ಅಸ್ತ್ರ, ಮಂತ್ರ ಹವನ ರಕ್ಷಾ ಹವನ, ಪ್ರಾಕಾರ ಗೋಪುರಾದಿ, ಶುದ್ದಿ ಸಂಬಂಧ ಹವನ ವಾಸ್ತು ದಿಕ್ಪಾಲಕ ಬಲಿ ತೀರ್ಥ ಪ್ರಸಾದ ವಿನಿಯೋಗ ಮುಂತಾದ ಪೂಜಾ ವಿಧಾನಗಳು ನೆರವೇರಲಿವೆ.
ಮೇ 22 ರಂದು ಮಹಾ ಗಣಪತಿ ಪೂಜೆ ದೇವತಾ ಪ್ರಾರ್ಥನೆ, ನವಗ್ರಹ ದೇವತಾ ಆರಾಧನೆ, ಪುಣ್ಯಾಹ, ಪ್ರಾಣ ಪ್ರತಿಷ್ಠಾ ಹವನ, ಮಹಾಗಣಪತಿ, ದೇವರ ಮೂಲ ಮಂತ್ರ ಹೋಮ, ಮೂರ್ತಿಯಲ್ಲಿ ಪ್ರಾಣ ಪ್ರತಿಷ್ಠಾ ವಿಧಿ ನೇತ್ರೋನ್ ಮಿಲನ ಶಕ್ತಿ ಹೋಮ, ತತ್ವ ಹೋಮ, ಚತುರ್ನವತಿ ಕಲಾ ಹೋಮ, ದೇವಕಲಾ ಸಂಯೋಜನೆ, ಮೂಲ ಮಂತ್ರ ಹೋಮ, ನವಗ್ರಹ ಪರಿವಾರ ದೇವತಾ ಹೋಮ, ಮಹಾಪೂರ್ಣಾಹುತಿ, ಬ್ರಹ್ಮಕಲಶವಿಧಿ ಫಲಪಂಚಾಮೃತ ಅಭಿಷೇಕ, ಬ್ರಹ್ಮ ಕಲಶಾಭಿಷೇಕ ಗಿರಿಜಾ ಕಲ್ಯಾಣ ದೇವರಿಗೆ ವಿಶೇಷ ಅಲಂಕಾರ ಮಹಾಮಂಗಳಾರತಿ ರಾಜಾ ಆಶೀರ್ವಾದ ತೀರ್ಥ ಪ್ರಸಾದ ವಿನಿಯೋಗ ಅನ್ನದಾನ ಮುಂತಾದ ಕಾರ್ಯಕ್ರಮಗಳು ನೆರವೇರಲಿವೆ ಎಂದು ಎಂದು ಆಯೋಜಕರು ತಿಳಿಸಿದ್ದಾರೆ.